ಸ್ಥಳಕೆ ದಾವಿಸಿ ಇ ಆಸ್ತಿ ಸಮಸ್ಯೆ ಪರಿಹರಿಸಿದ ಪಾಲಿಕೆಯ ಕಂದಾಯ ಉಪ ಆಯುಕ್ತರು..
ಕಂಪ್ಯೂಟರ್ ಕೇಂದ್ರ ಅಥವಾ ತಮ್ಮ ಮನೆಯಿಂದಲೇ ಅರ್ಜಿಗಳನ್ನು ಸಲ್ಲಿಸಬೇಕು..
ಸಿದ್ದು ಹುಲ್ಲೋಳಿ ಪಾಲಿಕೆಯ ಉಪ ಆಯುಕ್ತರು ಕಂದಾಯ..
ಬೆಳಗಾವಿ : 09/01/2026ರಿಂದ ಸಿಟಿಜೆನ್ ಲಾಗಿನನಲ್ಲಿ ಸಾರ್ವಜನಿಕರೇ ತಮ್ಮ ಇ ಆಸ್ತಿಗಳ ಅರ್ಜಿಯನ್ನು ಸಲ್ಲಿಸಲು ಅವಕಾಶ ಇದ್ದು, ಅವರ ಮನೆಯಿಂದ, ಬೆಳಗಾವಿ ಒನ್, ಹಾಗೂ ಇತರ ಕಂಪ್ಯೂಟರ್ ಕೇಂದ್ರಗಳಿಂದ ತಮ್ಮ ಇ ಆಸ್ತಿ ಅರ್ಜಿಗಳನ್ನು ಸಲ್ಲಿಸಬುದು ಎಂದು ಪಾಲಿಕೆಯ ಉಪ ಆಯುಕ್ತರಾದ (ಕಂದಾಯ) ಸಿದ್ದಪ್ಪ ಹುಲ್ಲೋಳ್ಳಿ ತಿಳಿಸಿದ್ದಾರೆ.

ಬುಧವಾರ ದಿನಾಂಕ 21/01/2026 ರಂದು ನಗರದ ಗೋವಾವೇಸ್ ನಲ್ಲಿರುವ ಪಾಲಿಕೆಯ ದಕ್ಷಿಣ ಕಂದಾಯ ಕಚೇರಿಯಲ್ಲಿ ಇ ಆಸ್ತಿ ನೋಂದಣಿಯ ಗೊಂದಲವನ್ನು ಪರಿಹರಿಸಲು ದಾವಿಸಿದ ಉಪ ಆಯುಕ್ತರು ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಅಲ್ಲೇ ಇದ್ದು, ಇ ಆಸ್ತಿಯ ಅರ್ಜಿಯನ್ನು ಹಾಕುವ ಮೂಲಕ ಸಮಸ್ಯೆಗೆ ತಿಳಿ ಹಾಡಿದ್ದಾರೆ.
ತಮ್ಮ ತಮ್ಮ ವಾರ್ಡಿನ ಕೆಲ ಸಾರ್ವಜನಿಕರ ಕೆಲ ಸಮಸ್ಯೆಗಳ ಪರಿಹಾರಕ್ಕಾಗಿ, ದಕ್ಷಿಣ ಭಾಗದ ಕೆಲ ನಗರ ಸೇವಕರು, ಕಂದಾಯ ಕಚೇರಿಗೆ ಆಗಮಿಸಿ, ಸರ್ವರ್ ಇಲ್ಲದೇ, ಇ ಆಸ್ತಿ ಅರ್ಜಿ ಹಾಕಲಾಗದೇ ಜನತೆ ಸಮಸ್ಯೆ ಎದುರಿಸುತ್ತಿದ್ದಾರೆ, ಸಭೆಯಲ್ಲಿ ಅರ್ಜಿ ಹಾಕುತ್ತೇವೆ ಎನ್ನುತ್ತಿರಾ, ಇಲ್ಲಿ ಯಾರು ಇಲ್ಲಾ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ವಿಷಯ ತಿಳಿದು ಸ್ಥಳಕ್ಕೆ ದಾವಿಸದ ಕಂದಾಯ ಉಪ ಆಯುಕ್ತರು, ನಗರ ಸೇವಕರೊಂದಿಗೆ ಚರ್ಚೆ ನಡೆಸಿ, ಕೆಲ ತಾಂತ್ರಿಕ ದೋಷಗಳನ್ನು ತಿಳಿಸಿ, ಸುಮಾರು ಮೂರ್ನಾಲ್ಕು ಗಂಟೆ ಅಲ್ಲಿಯೇ ಕುಳಿತು, ತಮ್ಮ ಕಚೇರಿಯ ಸಿಬ್ಬಂದಿಗಳಿಂದ ಇ ಆಸ್ತಿಗೆ ಅರ್ಜಿಯನ್ನು ಹಾಕಿ ತೋರಿಸಿದರು.
ಬಹುಮಹಡಿ ಕಟ್ಟಡಗಳ ಚಕಬಂದಿ ಸಮಸ್ಯೆ ಇದು ಅದರ ಆಯ್ಕೆಯೇ ಅರ್ಜಿ ಕಾಲಮ್ಮಿನಲ್ಲಿ ಇಲ್ಲಾ ಎಂದು ಕೆಲ ನಗರ ಸೇವಕರು ಕೇಳಿದಾಗ, ತಾವು ಅರ್ಜಿ ಸಲ್ಲಿಸಿ ಆಮೇಲೆ ನೋಡೋಣ, ಅದೇನು ದೊಡ್ಡ ಸಮಸ್ಯೆ ಅಲ್ಲಾ ಎಂದ ಅವರು, ಸಾರ್ವಜನಿಕರು ತಮ್ಮ ಮನೆಯಿಂದ, ಬೆಳಗಾವಿ ಒನ್ ಅಥವಾ ಯಾವುದಾದರು ಕಂಪ್ಯೂಟರ್ ಕೇಂದ್ರದಿಂದ ಅರ್ಜಿ ಸಲ್ಲಿಸಬೇಕು, ಏನಾದರು ಸಮಸ್ಯೆ ಇದ್ದರೆ ಮಾತ್ರ ನಮ್ಮ ಕಚೇರಿಗೆ ಸಂಪರ್ಕಿಸಿ ಎಂದು ಸಾರ್ವಜನಿಕರಿಗೆ ತಿಳಿಸಿದ್ದಾರೆ.
ಇದಾದ ನಂತರ ಪಕ್ಕದ ಬೆಳಗಾವಿ ಒನ್ ಕೇಂದ್ರಕ್ಕೂ ಬೇಟಿ ನೀಡಿ ಅಲ್ಲಿ ಅರ್ಜಿ ಹಾಕುವ ಪ್ರಕ್ರಿಯೆಯನ್ನು ಪರಿಶೀಲಿಸಿದ ಉಪ ಆಯುಕ್ತರು, ಮೊದಮೊದಲು ಸ್ವಲ್ಪ ಸಮಸ್ಯೆ ಆಗುತ್ತದೆ, ಕೆಲ ಅರ್ಜಿಗಳನ್ನು ಹಾಕಿದ ನಂತರ ಸಮಸ್ಯೆಗಳಿಗೆ ಪರಿಹಾರಗಳು ಸಿಗುತ್ತವೆ ಎಂದ ಅವರು ಅರ್ಜಿ ಹಾಕುವಾಗ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡಿರಬೇಕು, ಹಾಗೆನಾದರೂ ಸಮಸ್ಯೆಗಳು ಕಂಡುಬಂದರೆ ಬರುವ ದಿನಗಳಲ್ಲಿ ಸರಿಪಡಿಸಿಕೊಂಡು ಮುಂದೆ ಹೋಗುತ್ತೇವೆ ಎಂದರು..
ವರದಿ ಪ್ರಕಾಶ್ ಬಿ ಕೆ.