ಬೆಳಗಾವಿಯಲ್ಲಿ ಮಾಂಗಲ್ಯ ಶಾಪಿಂಗ್ ಮಾಲ್ ಉದ್ಘಾಟನೆ ಮಾಡಿದ್ದು ಸಂತಸ ತಂದಿದೆ..

ಬೆಳಗಾವಿಯಲ್ಲಿ ಮಾಂಗಲ್ಯ ಶಾಪಿಂಗ್ ಮಾಲ್ ಉದ್ಘಾಟನೆ ಮಾಡಿದ್ದು ಸಂತಸ ತಂದಿದೆ..

ಮದುವೆ ಹಬ್ಬ ಸಡಗರ ಸಂಭ್ರಮಗಳಿಗೆ ಮಾಂಗಲ್ಯದಲ್ಲಿ ಆರಾಮಾಗಿ ಶಾಪಿಂಗ ಮಾಡಬಹುದು..

ನಟಿ ಶ್ರೀಲೀಲಾ..

ಬೆಳಗಾವಿ : ಬೆಳಗಾವಿಯಲ್ಲಿ ಬ್ರಹತ್ತಾದ ಮಂಗಲ್ಯ ಬಟ್ಟೆ ಶಾಪಿಂಗ್ ಮಾಲ ಅನ್ನು ಉದ್ಘಾಟನೆ ಮಾಡಿದ್ದು ತುಂಬಾ ಸಂತಸ ನೀಡಿದೆ, ಮದುವೆ, ಹಬ್ಬ ಹರಿದಿನ, ಸಂಭ್ರಮ ಸಡಗರಗಳಿಗೆ ಆರಾಮಾಗಿ ಇಲ್ಲಿ ಬಂದು ಬಟ್ಟೆ ಖರೀದಿ ಮಾಡಬಹುದು, ಇಲ್ಲಿ ಉತ್ತಮ ಗುಣಮಟ್ಟದ ವೈವಿಧ್ಯಮಯ ಬಟ್ಟೆಗಳು ಸಿಗುತ್ತವೆ ಎಂದು ಬಹುಭಾಷಾ ನಟಿ ಶ್ರೀಲೀಲಾ ಹೇಳಿದ್ದಾರೆ..

ಸೋಮವಾರ ದಿನಾಂಕ 02/02/2026 ರಂದು ನಗರದ ಅನಿಗೋಳ ವೃತ್ತದಲ್ಲಿ ಪ್ರಾರಂಭವಾದ ಮಾಂಗಲ್ಯ ಎಂಬ ಬ್ರಹತ್ ಬಟ್ಟೆ ಅಂಗಡಿಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಶ್ರೀಲೀಲಾ ಅವರು, ಜನರ ಕೈಗೆ ಎಟಕುವ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಬಟ್ಟೆಗಳನ್ನು ಗ್ರಾಹಕರಿಗೆ ಒದಗಿಸುವ ಒಳ್ಳೆ ಉದ್ದೇಶ ಇಟ್ಟುಕೊಂಡು ಈ ಮಾಂಗಲ್ಯ ಎಂಬ ಬಟ್ಟೆ ಶಾಪಿಂಗ್ ಮಾಲ್ ಬೆಳಗಾವಿಯಲ್ಲಿ ಪ್ರಾರಂಭವಾಗಿದೆ ಅವರಿಗೆ ಶುಭವಾಗಲಿ, ಜೊತೆಗೆ ಬೆಳಗಾವಿ ಹಾಗೂ ಸುತ್ತಮುತ್ತಲಿನ ಎಲ್ಲಾ ನಗರಗಳ ಜನತೆಗೂ ಇದರಿಂದ ಉತ್ತಮ ಉಡುಗೆಗಳು ಸಿಗುವಂತಾಗಲಿ ಎಂದರು.

ಮಾಂಗಲ್ಯ ಬಟ್ಟೆ ಅಂಗಡಿಯವರು ಆಂಧ್ರ, ತೆಲಂಗಾನ ಹಾಗೂ ಕರ್ನಾಟಕ ಸೇರಿ ಒಟ್ಟು 28 ಶಾಖೆಗಳನ್ನು ತೆರೆದಿದ್ದು, ಕರ್ನಾಟಕದಲ್ಲಿ ಇದು ಅವರ ಐದನೇಯ ಶಾಪಿಂಗ್ ಮಾಲ್, ಒಟ್ಟು 8500 ಜನರಿಗೆ ಅವರು ಉದ್ಯೋಗಾವಕಾಶ ನೀಡಿದ್ದು, ಈ ಬೆಳಗಾವಿಯಲ್ಲಿ ಇಲ್ಲೇ ಇರುವ ಸುಮಾರು 250 ಜನಕ್ಕೆ ಉದ್ಯೋಗಾವಕಾಶ ನೀಡಿದ್ದು ಮಾಂಗಲ್ಯ ಕಂಪನಿ ಅವರ ಕೊಡುಗೆ ಎಂದಿದ್ದಾರೆ.

ನೂರು ರೂಪಾಯಿಯಿಂದ ಒಂದು ಲಕ್ಷದವರೆಗಿನ ಸೀರೆಗಳು, ಮಕ್ಕಳಿಂದ ಹಿಡಿದು ಮುದುಕರವರೆಗಿನ ಎಲ್ಲಾ ರೀತಿಯ ಬಟ್ಟೆಗಳು ಇಲ್ಲಿ ಲಭ್ಯವಿದ್ದು, ಬಗೆಬಗೆಯ ವಿನ್ಯಾಸದ ಹಾಗೂ ಗುಣಮಟ್ಟದ, ಬಡ ಮಾಧ್ಯಮ ವರ್ಗದ ಜನರ ಬೆಲೆಗೆ ತೂಗುವ ಬಟ್ಟೆಗಳು ಇಲ್ಲಿ ದೊರಕುತ್ತಿದ್ದು ಬೆಳಗಾವಿಯಲ್ಲಿ ನನ್ನ ಅಭಿಮಾನಿಗಳು ಇದ್ದೀರಾ, ಒಮ್ಮೆ ಇಲ್ಲಿ ಬೇಟಿ ನೀಡಿ, ವಸ್ತುಗಳ ಗುಣಮಟ್ಟವನ್ನು ನೀವೇ ಪರೀಕ್ಷಿಸಿ ನೋಡಬಹುದು ಎಂದಿದ್ದಾರೆ.

ಬೆಳಗಾವಿಗೆ ಹಾಗೂ ಬೇರೆ ಕಡೆಗೆ ನಾವು ಸಿನಿಮಾ ಪ್ರಚಾರಕ್ಕಾಗಿ ಹೋಗುತ್ತೇವೆ ಆದರೆ ಇಂದು ಒಂದು ವಿಶೇಷ ಬಟ್ಟೆ ಶಾಪಿಂಗ್ ಮಾಲ್ ಅನ್ನು ಉದ್ಘಾಟನೆ ಮಾಡಲಿಕ್ಕೆ ಬಂದಿದ್ದೇನೆ, ಮಾಂಗಲ್ಯ ಬಟ್ಟೆ ಶಾಪಿಂಗ್ ಮಾಲ್ ತುಂಬಾ ನಂಬಿಕೆಯುಳ್ಳದ್ದು ಇಂದು ನಾನು ಧರಿಸಿದ ಸಾರಿಯೂ ಮಾಂಗಲ್ಯ ಕಲೆಕ್ಷನ ಅವರದ್ದೇ, ಎಲ್ಲಾ ವಯಸ್ಸಿನ ಮಹಿಳೆ ಹಾಗೂ ಪುರುಷರಿಗೂ ಇಷ್ಟವಾಗುವ ಗುಣಮಟ್ಟದ ಬಟ್ಟೆಗಳು ಇಲ್ಲಿ ಸಿಗುವದರಿಂದ ಎಲ್ಲರೂ ಬಂದು ಶಾಪಿಂಗ್ ಮಾಡಿ ಎಂದರು..

ಪ್ರಕಾಶ ಬಿ ಕೆ

Leave a Reply

Your email address will not be published. Required fields are marked *