ಬಿಸಿಲು ಬೇಗೆಯಲಿ ಬೆಂದ ಬೆಳಗಾವಿಗೆ ತಂಪೇರೆದ ಮಳೆರಾಯ..
ಬೆಳಗಾವಿ : ಕಳೆದ ಹಲವು ದಿನಗಳಿಂದ ಬೆಳಗಾವಿ ನಗರದಲ್ಲಿ ಪ್ರತಿದಿನ ಸುಮಾರು 35, 36 ಡಿಗ್ರಿಯ ಅತೀ ಉಷ್ಣದಿಂದ ಇಡೀ ನಗರವೇ ಕಾದು ಕೆಂಡದಂತೆ ಆಗಿ ಮಧ್ಯಾಹ್ನದ ವೇಳೆ ಜನರು ಹೊರಗಡೆ ಹೋಗದ ಸ್ಥಿತಿ ನಿರ್ಮಾಣವಾಗಿತ್ತು.
ಆದರೆ ಇಂದು ಗುರುವಾರ ಮಧ್ಯಾಹ್ನದ ವೇಳೆಗೆ ಕುಂದಾನಗರಿಗೆ ಮಳೆಸುರಿಸಿದ ವರುಣರಾಯ ಕಾದು ಕೆಂಪಾದ ನಗರಕ್ಕೆ ತಂಪೆರೆದಿದ್ದಾನೆ, ಇದರ ಜೊತೆಗೆ ಬಿಸಿಲಿಗೆ ಬೆಸತ್ತ ಜನರ ಮನಸ್ಸುಗಳಿಗೂ ತಂಪೆರೆದಿದ್ದು ಜನರ ಮನಸ್ಸಿಗೆ ಮೃದು ನೀಡಿದ್ದಾನೆ..
ಸುಮಾರು ಅರ್ಧಗಂಟೆಯಿಂದ ಶುರುವಾದ ಮಳೆ ಇನ್ನು ಮುಂದುವರೆದಿದ್ದು ಬಹುತೇಕ ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಒಳ್ಳೆಯ ಪ್ರಮಾಣದಲ್ಲಿ ಮಳೆ ಆಗಿರುವ ನಿರೀಕ್ಷೆ ಇದೆ..