ಉಷಾತಾಯಿ ಗೊಗಟೆ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಗೌರವ ಸಮಾರಂಭ..

ಉಷಾತಾಯಿ ಗೊಗಟೆ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಗೌರವ ಸಮಾರಂಭ..

ಬೆಳಗಾವಿ : ಬೆಳಗಾವಿ ಎಜ್ಯುಕೇಶನ್ ಸೊಸೈಟಿಯ ಶ್ರೀಮತಿ ಉಷಾತಾಯಿ ಗೊಗಟೆ ಬಾಲಕಿಯರ ಪ್ರೌಢ ಶಾಲೆಯಲ್ಲಿ 2025–26ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ 99% ಆಗಿದ್ದು, 46 ವಿದ್ಯಾರ್ಥಿನಿಯರು ವಿಶೇಷ ಶ್ರೇಣಿಯಲ್ಲಿ , 77 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ, 21 ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿಯಲ್ಲಿ ಹಾಗೂ 11 ವಿದ್ಯಾರ್ಥಿನಿಯರು ತೃತೀಯ ಶ್ರೇಣಿಯಾವ ಉತ್ತೀರ್ಣರಾಗಿದ್ದಾರೆ.

ಅನುಷಾ ಕನ್ನಾಳ ವಿದ್ಯಾರ್ಥಿನಿ 98.72% ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಪರೀಕ್ಷೆಯಲ್ಲಿ ವಿಶೇಷ ಪ್ರಾವೀಣ್ಯತೆಯೊಂದಿಗೆ ಉತ್ತೀರ್ಣರಾದ 46 ವಿದ್ಯಾರ್ಥಿನಿಯರು ಹಾಗೂ ಅವರ ಪಾಲಕರಿಗೆ ಸಂಸ್ಥೆಯ ವತಿಯಿಂದ ಗುಲಾಬಿ ಹೂವು ಮತ್ತು ಸಿಹಿ ನೀಡಿ ಗೌರವಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಅವಿನಾಶ್ ಪೊತದಾರ ಮತ್ತು ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರಾದ ಚಿಂತಾಮಣಿ ಗ್ರಾಮೋಪಾಧ್ಯೇಯ ಉಪಸ್ಥಿತರಿದ್ದರು.

ಶಾಲೆಯ ನಿವೃತ್ತ ಶಿಕ್ಷಕಿ ಸರಸ್ವತಿ ದೇಶಾಯಿ ಅವರ ವಿಶೇಷ ಹಾಜರಾತಿ ಇದ್ದು, ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಕೆ. ಮದಾರ ಅವರು ಎಲ್ಲರಿಗೂ ಸ್ವಾಗತ ಕೋರಿ ಪ್ರಸ್ತಾವಿಕ ಭಾಷಣ ಮಾಡಿದರು. ಅವಿನಾಶ್ ಪೊತ್ದಾರ ಮತ್ತು ಚಿಂತಾಮಣಿ ಗ್ರಾಮೋಪಾಧ್ಯೇ ಅವರು ಪರೀಕ್ಷೆಯಲ್ಲಿ ಯಶಸ್ವಿ ಸಾಧಿಸಿದ ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು.

ಸರ್ಕಾರಿ ಕನ್ನಡ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ನಂಬರ್ 5 ವಡಗಾವಿ ಈ ಶಾಲೆಯ ಮುಖ್ಯೋಪಾಧ್ಯಾಯರಾದ ನಂದೇಶ ಕಾಗತೀಕರ ಅವರು ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದ ಅನುಷಾ ಕನ್ನಾಳ ಅವರಿಗೆ ₹5000 ಮತ್ತು ಮರಾಠಿ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದ ಪೂಜಾ ಜಾಧವ ಅವರಿಗೆ ₹5000 ಬಹುಮಾನ ನೀಡಿದರು. ಅದೇ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕರಾದ ರಾಜೇಂದ್ರ ಭಂಡಾರಿ ಅವರು ಅನುಷಾ ಕನ್ನಾಳ ಅವರಿಗೆ ₹2500 ಬಹುಮಾನ ನೀಡಿದರು.

ಹತ್ತನೇ ತರಗತಿಯ ವರ್ಗ ಶಿಕ್ಷಕರಾದ ವ್ಯಂಕಟೇಶ ಕುಲಕರ್ಣಿ ಅವರು ಧನ್ಯವಾದಗಳನ್ನು ಸಲ್ಲಿಸಿದರು. ಶ್ರೀದೇವಿ ಕುಲಕರ್ಣಿ ಅವರು ಕಾರ್ಯಕ್ರಮವನ್ನು ನನಿರೂಪಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು, ಶಿಕ್ಷಕರು ಹಾಗೂ ಪಾಲಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *