ಎಲ್ ಅಂಡ್ ಟಿ ಅವರು ತೋಡಿದ ಗುಂಡಿ ಮುಚ್ಚಿದ ಟ್ರಾಫಿಕ್ ಪೊಲೀಸರು.
ಸಾರ್ವಜನಿಕರಿಗಲ್ಲದೇ ಸಂಚಾರಿ ಪೊಲೀಸರಿಗೂ ಎಲ್ ಅಂಡ್ ಟಿಯಿಂದ ತೊಂದರೆ..
ಬೆಳಗಾವಿ : ಪ್ರತಿನಿತ್ಯ ದಟ್ಟವಾದ ಸಂಚಾರ ಸಮಸ್ಯೆ ಆಗುತ್ತಿರುವ ನಗರದ ಶನಿ ಮಂದಿರ ಪಕ್ಕದ ಕಪಿಲೇಶ್ವರ ಮೇಲಸೇತುವೆ ರಸ್ತೆಗೆ ಹೋಗುವ ಮಾರ್ಗದಲ್ಲಿ ಎಲ್ ಎಂಡ್ ಟಿ ಅವರು ನೀರಿನ ಪೈಪಲೈನ್ ಜೋಡಿಸಿದ್ದು, ಅಲ್ಲಿ ಗುಂಡಿ ತಗೆದು ಸರಿಯಾಗಿ ಮುಚ್ಚದೆ ಹಾಗೆ ಹೋಗಿದ್ದರಿಂದ, ವಾಹನಗಳು ಸಂಚಾರಕ್ಕೆ ತೊಂದರೆ ಆಗಿ ಕೊನೆಗೆ ಟ್ರಾಫಿಕ್ ಪೊಲೀಸರೇ ಸಲಕಿ ಹಿಡಿದು ಗುಂಡಿ ಮುಚ್ಚುವ ಪರಿಸ್ಥಿತಿ ಉಂಟಾಗಿತ್ತು..
ಮಂಗಳವಾರ ಮುಂಜಾನೆ ಜನರು ತಮ್ಮ ತಮ್ಮ ಕೆಲಸಕ್ಕಾಗಿ ಹೋಗುತ್ತಿರುವ ವೇಳೆ ಶನಿ ಮಂದಿರದ ವೃತ್ತದಲ್ಲಿ ಬಾರಿ ಪ್ರಮಾಣದ ಸಂಚಾರ ದಟ್ಟನೆಯ ಸಮಸ್ಯೆ ಉಂಟಾಗಿತ್ತು, ಗಾಡಿ ಸೈಡಿಗೆ ಹಾಕಿ ಅಲ್ಲಿ ಹೋಗಿ ನೋಡಿದರೆ, ಟ್ರಾಫಿಕ್ ಪೊಲೀಸರು ಸಲಕಿ ಹಿಡಿದುಕೊಂಡು ರಸ್ತೆಯಲ್ಲಿ ಆಗೇದ ಗುಂಡಿಯನ್ನು ಮುಚ್ಚುತ್ತಿದ್ದರು, ಎಲ್ ಎಂಡ್ ಟಿ ಅವರು ನೀರಿನ ಪೈಪಲೈನ್ ಹಾಕಿ ಸರಿಯಾಗಿ ಮುಚ್ಚದೆ ಹಾಗೆ ಬಿಟ್ಟಿರುವದರಿಂದ ವಾಹನ ಸಂಚಾರಕ್ಕೆ ತೊಂದರೆ ಆಗಿ ಕೊನೆಗೆ ನಾವೇ ಈ ಗುಂಡಿಯನ್ನು ಮುಚ್ಚುತ್ತಿದ್ದೇವೆ ಎಂದು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ತಮ್ಮ ಕಷ್ಟ ಹೇಳಿಕೊಂಡರು.

ಇಷ್ಟು ದಿನಗಳ ಕಾಲನಗರದಲ್ಲಿ ಬಹುತೇಕ ಕಡೆಗೆ ಗುಂಡಿ ತಗೆದು, ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಎಲ್ ಅಂಡ್ ಟಿ ಕಂಪನಿಯಿಂದ ಇಂದು ಟ್ರಾಫಿಕ್ ಪೊಲೀಸರಿಗೂ ತೊಂದರೆ ಆಗಿದೆ, ಆದರೆ ಟ್ರಾಫಿಕ್ ಪೋಲೀಸರು ಜನರ ಸಂಚಾರಕ್ಕೆ ಮಾಡಿದ ಗುಂಡಿ ಮುಚ್ಚುವ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿತ್ತು.
ಇನ್ಮುಂದಾದರೂ ಸ್ಥಳೀಯ ಇಬ್ಬರು ಶಾಸಕರು, ಇಬ್ಬರು ಸಚಿವರು, ನಗರ ಸೇವಕರು, ಪಾಲಿಕೆಯ ಅಧಿಕಾರಿಗಳು ಹಾಗೂ ನಗರ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಈ ಎಲ್ ಆಂಡ್ ಟಿ ಅವರಿಗೆ ಕಟ್ಟುನಿಟ್ಟಾದ ಸೂಚನೆ ನೀಡಲಿ, ಆ ಮೂಲಕ ಸಾರ್ವಜನಿಕರಿಗೆ ಹಾಗೂ ಉತ್ತಮ ರಸ್ತೆಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಿ ಎಂಬುದು ಜನರ ಆಶಯವಾಗಿದೆ..
ವರದಿ ಪ್ರಕಾಶ್ ಬಿ ಕೆ..