ಗಡಿಭಾಗದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕನ್ನಡದ ಕಡೆಗಣನೆ..

ಗಡಿಭಾಗದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕನ್ನಡದ ಕಡೆಗಣನೆ..

ಅಧಿಕಾರಿಗಳ ನಿರ್ಲಕ್ಷಕ್ಕೆ ಗುಡುಗಿದ ಗಡಿನಾಡು ಕನ್ನಡಿಗರ ಸೇನೆ..

ಬೆಳಗಾವಿ : ಕನ್ನಡ ನಾಡು ನುಡಿಯ ರಕ್ಷಣೆಗಾಗಿ ಕನ್ನಡಪರ ಸಂಘಟನೆಗಳು ಹಗಲಿರುಳು ಶ್ರಮುಸುತ್ತಿದ್ದು ಅದರಲ್ಲಿ ಗಡಿನಾಡು ಕನ್ನಡಿಗರ ಸೇನೆಯು, ವಿಶೇಷವಾಗಿ ಗಡಿ ಭಾಗದಲ್ಲಿ ಇರುವ ಗ್ರಾಮಗಳಲ್ಲಿ ಕನ್ನಡದ ಜಾಗೃತಿ ಆಗಬೇಕು, ಕನ್ನಡ ಎಲ್ಲಿ ಕಡಿಮೆ ಇದೆಯೋ ಅಲ್ಲಿ ಕನ್ನಡ ಬೆಳೆಯಬೇಕು ಎಂಬ ಉದ್ದೇಶದಿಂದ ಕಳೆದ ಆರು ತಿಂಗಳಿನಿಂದ ವಿಶೇಷ ಅಭಿಯಾನ ಮಾಡುತ್ತಿದ್ದು, ಇನ್ನೂ ಪರಿಣಾಮಕಾರಿಯಾದ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ಕೆಲ ಗ್ರಾಮ ಪಂಚಾಯತಿ ಅಧಿಕಾರಿಗಳ ಮೇಲೆ ಕಿಡಿ ಕಾರಲಾಗಿದೆ..

ಮಂಗಳವಾರ ದಿನಾಂಕ 19/05/2026ರಂದು ಬೆಳಗಾವಿಯ ಗಡಿ ಭಾಗದ ಗ್ರಾಮ ಪಂಚಾಯತಿಗಳಾದ ಹೊನಗಾ ಹಾಗೂ ಕಡೋಲಿ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ, ರಾಜ್ಯ ಸರ್ಕಾರದ ಆದೇಶದ ಪ್ರಕಾರ ಕನ್ನಡ ಭಾಷೆಯ ಅನುಷ್ಠಾನ ಆಗದೇ, ವಾಣಿಜ್ಯ ಉದ್ದಿಮೆಗಳು ಹಾಗೂ ಸಂಸ್ಥೆಗಳಲ್ಲಿ ಅನ್ಯ ಭಾಷೆಯ ನಾಮಫಲಕಗಳು ಹಾಗೂ ಕಚೇರಿಗಳಲ್ಲಿ ಅನ್ಯಭಾಷೆಯ ಶೀರ್ಷಿಕೆಗಳು ಕಂಡು ಬಂದಿದ್ದು, ಇದರ ಬಗ್ಗೆ ಅಧಿಕಾರಿಗಳಾಗಿ ತಾವು ಯಾಕೆ ಕ್ರಮ ತಗೆದುಕೊಂಡಿಲ್ಲ ಎಂದು ಗಡಿನಾಡು ಕನ್ನಡಿಗರ ಸೇನೆಯ ಪದಾಧಿಕಾರಿಗಳು ಪ್ರಶ್ನೆ ಮಾಡಿದ್ದರೆ.

ಸುಮಾರು ಆರು ತಿಂಗಳ ಹಿಂದೆ ಗಡಿ ಭಾಗದ ಗ್ರಾಮಗಳಲ್ಲಿ ಕನ್ನಡ ಭಾಷೆಯ ಕಡ್ಡಾಯ ಅನುಷ್ಠಾನಕ್ಕಾಗಿ ಸಂಘಟನೆಯಿಂದ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಯಶವಂತ ಕುಮಾರ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಅದಕ್ಕೆ ತಕ್ಷಣವೇ ಸ್ಪಂದನೆ ನೀಡಿ, ಕನ್ನಡ ನಮ್ಮ ಮಾತೃ ಭಾಷೆ ಎಂದು ಒಬ್ಬ ಕನ್ನಡದ ಅಧಿಕಾರಿಯಾಗಿ ಹೆಮ್ಮೆಯಿಂದ, ಕನ್ನಡ ಭಾಷೆ ಕಡ್ಡಾಯವಾಗಿ ಜಾರಿಯಾಗಬೇಕು ಎಂದು ಆದೇಶ ಹೋರಡಿಸಿದ್ದರು, ಅಧಿಕಾರಿ ಯಶವಂತಕುಮಾರ ಅವರ ವೃತ್ತಿಪರತೆ ಹಾಗೂ ಅವರ ಕನ್ನಡದ ಕಾಳಜಿಯನ್ನು ಸಂಘಟನೆ ಆವಾಗ ಶ್ಲಾಘನೇ ಕೂಡಾ ಮಾಡಿತ್ತು.

ಅವರು ಆದೇಶ ಮಾಡಿ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಕಳಿಸಿ ಆರು ತಿಂಗಳಾದರೂ ಕೂಡಾ, ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು ಇನ್ನೂ ಇದರ ಬಗ್ಗೆ ಗಂಭೀರವಾಗಿ ಕೆಲಸ ಮಾಡಿಲ್ಲ, ಇಂತ ಅಧಿಕಾರಿಗಳಿಗೆ ಕನ್ನಡ ಸಂಬಳ ಏಕೆ? ಕರ್ನಾಟಕ ಸರ್ಕಾರದ ಅನುದಾನ ಏಕೆ? ಅನ್ಯ ಭಾಷೆಯನ್ನು ಸಹಿಸಿಕೊಳ್ಳುವ ಇವರು ಅಲ್ಲಿಂದಲೇ ಇವರ ಸಂಬಳ ಹಾಗೂ ಕಚೇರಿಗೆ ಅನುದಾನವನ್ನು ಪಡೆಯಲಿ ಎಂದು ಸಂಘಟನೆಯ ಸದಸ್ಯರು ಪಂಚಾಯತಿ ಮಟ್ಟದ ಅಧಿಕಾರಿಗಳ ಮೇಲೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *