ಡೋರ್ ಸಮುದಾಯದ ಶತಾಯುಷಿ ವೆಂಕುಸಿಂಗ ಬಾದಾಮಿ ನಿಧನ..
ದೀಮಂತ ನಾಯಕನ ಅಗಲಿಕೆಗೆ ಕಂಬನಿ ಮಿಡಿದ ಡೋರ್ ಸಮುದಾಯ..
ಬೆಳಗಾವಿ : ನಗರದ ವಂಟಮೂರಿ ಕಾಲೋನಿಯ ಹಿಂದೂ ಡೋರ ಸಮುದಾಯದ ಹಿರಿಯ ಧೀಮಂತ ನಾಯಕರಾದ ವೆಂಕುಸಿಂಗ ರಾಮು ಬಾದಾಮಿ ಅವರು ಇಂದು ಸಂಜೆ ಕೈಲಾಸವಾಸಿಯಾಗಿದ್ದು ಮೃತರ ಅಗಲಿಕೆಗೆ ಕುಟುಂಬಸ್ಥರು ಹಾಗೂ ಸಮುದಾಯದ ಜನತೆ ಸಂತಾಪ ಸೂಚಿಸಿದ್ದಾರೆ.
ಶತಾಯುಷಿಗಳಾಗಿದ್ದ ವೆಂಕುಸಿಂಗ ಬಾದಾಮಿ ಅವರು ಡೋರ್ ಸಮುದಾಯದ ಅಭಿವೃದ್ಧಿ ಹಾಗೂ ಏಳಿಗೆಗಾಗಿ ಜೀವನವೀಡಿ ಶ್ರಮಿಸಿದ್ದು ತಮ್ಮ ಸಮುದಾಯದ ಜನತೆಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದ ಮಹನೀಯರಾಗಿದ್ದರು.
ವಂಟಮುರಿ ಕಾಲೇನಿಯ ಮಾರೆಮ್ಮದೇವಿ ಹಾಗೂ ಕೊಳದವ್ವ ದೇವಿ ದೇವಸ್ಥಾನದ ಜಾತ್ರಾ ಸಮಿತಿಯ ಅಧ್ಯಕ್ಷರಾದ ಇವರ ಅಗಲಿಕೆಗೆ ಸಮುದಾಯ ಬಾಂಧವರು ಹಾಗೂ ಕುಟುಂಬದ ಸದಸ್ಯರು ಕಂಬನಿ ಮಿಡಿದಿದ್ದು, ಅವರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಪ್ರಾರ್ಥಿಸಿದ್ದಾರೆ..