ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಬಾರದ ಕಿರಿಕಿರಿ..

ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಬಾರದ ಕಿರಿಕಿರಿ..

ಮಕ್ಕಳ ಕಷ್ಟವನ್ನು ಶಿಕ್ಷಕರು ಹಾಗೂ ಅಧಿಕಾರಿಗಳು ಅರಿಯಬೇಕಿದೆ.

ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಒದಗಿಸುವ ಭರವಸೆ..

ಬೆಳಗಾವಿ : ಮೇಲಿನಿಂದ ದೊ ಎಂದು ಸುರಿಯುತ್ತಿರುವ ಮಳೆ, ಅರ್ಧಮರ್ದ ಆದ ರೆನ್ ಕೋಟು, ರಸ್ತೆಯಲ್ಲಿ ಗಿಜಿಬಿಜಿ ವಾಹನಗಳ ಮದ್ಯೆ ಸೈಕಲ್ ಸವಾರಿ, ಒಂದು ಹ್ಯಾಂಡಲಗೆ ಊಟದ ಬ್ಯಾಗ್ ಮತ್ತೊಂದೆಡೆ ವಾಟರ್ ಬಾಟಲ್ ಬ್ಯಾಗ್, ಇದೆಲ್ಲಕ್ಕಿಂತ ಬಲುಬಾರ ಹತ್ತಾರು ಕೆಜಿ ತೂಕದ ಸ್ಕೂಲ್ ಬ್ಯಾಗ್ ಹೊತ್ತುಕೊಂಡು, ಮುಂಜಾನೆ ಹೇಗೋ ತಯಾರಾಗಿ ಶಾಲೆಗೆ ತೆರೆಳುವ ಮಕ್ಕಳ ಮನಸ್ಥಿತಿ ಹಾಗೂ ಪರಿಸ್ಥಿತಿ ಶಿಕ್ಷಕರಿಗೆ ಹಾಗೂ ಅಧಿಕಾರಿಗಳಿಗೆ ಎಲ್ಲಿ ಗೊತ್ತಾಗಬೇಕು??

ನಗರದ ಬಹುತೇಕ ಸರ್ಕಾರಿ ಹಾಗೂ ಅನುದಾನಿತ, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಹಂತದ ಮಕ್ಕಳ ಪರಿಸ್ಥಿತಿ ಇದು. ಇಲ್ಲಿ ಹೆಚ್ಚಾಗಿ ಬಡ ಹಾಗೂ ಮದ್ಯಮ ವರ್ಗದ ಕುಟುಂಬಗಳ ಮಕ್ಕಳು ಅಧ್ಯಯನ ಮಾಡುತ್ತಿದ್ದು, ಪ್ರತಿನಿತ್ಯ ಹತ್ತಾರು ಕೆಜಿಯ ಬಲುಬಾರವಾದ ಸ್ಕೂಲ್ ಬ್ಯಾಗ್ ಅನ್ನು ಹೊತ್ತುಕೊಂಡು ಹೋಗುವದನ್ನು ನೋಡಿದರೆ, ಮಕ್ಕಳು ಶಿಕ್ಷಣವನ್ನು ಕಲಿಯಲು ಹೋಗುತ್ತಿದ್ದಾರೊ ಅಥವಾ ಬಾರ ಹೊರುವ ಶಿಕ್ಷೆ ಅನುಭವಿಸುತ್ತಿದ್ದಾರೊ ಎಂಬ ಪ್ರಶ್ನೆ ಕಾಡುತ್ತದೆ. ಮಕ್ಕಳು ಪಡುವ ಈ ವೇದನೆಯನ್ನು ಶಿಕ್ಷಕರಿಗೆ, ಶಿಕ್ಷಣ ಅಧಿಕಾರಿಗಳಿಗೆ, ಹಾಗೂ ಶಿಕ್ಷಣ ಮಂತ್ರಿಗಳಿಗೆ ನೀಡಿದರೆ ಅವರ ಕೈಲಿ ಕನಿಷ್ಠ ಅರ್ಧ ವರ್ಷವೂ ಆಗುವದಿಲ್ಲ ಅನಿಸುತ್ತದೆ.

ಮಕ್ಕಳಿಗೆ ಸಮಸ್ಯೆ ಆಗುತ್ತಿರುವ ಈ ಅವೈಜ್ಞಾನಿಕ ಸ್ಕೂಲ್ ಬ್ಯಾಗಿನ ಬಾರದ ಹೊರೆಯನ್ನು ನಿಯಂತ್ರಿಸುವದು ತುಂಬಾ ಅವಶ್ಯಕವಾಗಿದೆ, ಏಕೆಂದರೆ ಶಾಲೆಗೆ ವಿದ್ಯೆ ಕಲಿಯಲು ಮಕ್ಕಳು ಖುಷಿಯಿಂದ ಬರಬೇಕು ಹೊರತು ಕಷ್ಟಪಟ್ಟು ಅಲ್ಲಾ, ಈ ವಿಚಾರವಾಗಿ ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಉಪನಿರ್ದೇಶಕರು ಹಾಗೂ ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಕೇಳಿದಾಗ, ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಶನಿವಾರ ಬ್ಯಾಗ್ ಲೆಸ್ ಡೇ ಎಂದು ಮಾಡುತ್ತಿದ್ದೇವೆ, ಜೊತೆಗೆ ಇನ್ನೆರಡು ದಿನಗಳಲ್ಲಿ ನಗರದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಸಿಬ್ಬಂದಿಗಳೊಂದಿಗೆ ವಿಶೇಷ ಸಭೆ ನಡೆಸಿ, ಈ ಸ್ಕೂಲ ಬ್ಯಾಗ ಬಾರದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎಂಬ ಭರವಸೆಯನ್ನು ನೀಡಿದ್ದಾರೆ.

ಶಾಲಾ ಶಿಕ್ಷಕರು ಕೂಡಾ, ಎಷ್ಟು ಅವಶ್ಯಕವೋ ಅಷ್ಟೇ ಬುಕ್ಸ್ ಹಾಗೂ ಕಲಿಕಾ ಸಾಮಗ್ರಿಗಳನ್ನು ತರುವಂತೆ ಮಕ್ಕಳಿಗೆ ತಿಳಿಸಬೇಕು, ಎಲ್ಲರಿಗಿಂತ ತಮ್ಮ ಶಿಕ್ಷಕರ ಮಾತನ್ನು ಮಕ್ಕಳು ಕೇಳುವರು, ತಮ್ಮ ವಿದ್ಯಾರ್ಥಿಗಳ ಬೆನ್ನು, ಬಾರವನ್ನು ಹೊತ್ತು ಬೆಂಡು ಆಗಬಾರದು ಎಂಬ ಕಾಳಜಿಯಿಂದಾದರೂ ಬ್ಯಾಗ್ ಬಾರವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಬೇಕು, ಏಕೆಂದರೆ ಶಿಕ್ಷಕರ ಮಕ್ಕಳೂ ಕೂಡಾ ಬೇರೊಂದು ಶಾಲೆಯ ವಿದ್ಯಾರ್ಥಿಗಳೇ ಅಲ್ವಾ? ಇದರಿಂದ ತಮ್ಮ ಮಕ್ಕಳ ಬ್ಯಾಗ್ ಬಾರವೂ ಕಡಿಮೆಯಾದಿತು. ಒಟ್ಟಿನಲ್ಲಿ ಈ ಸ್ಕೂಲ್ ಬ್ಯಾಗ್ ಬಾರ ಕಡಿಮೆ ಆಗಿ, ಮುಗ್ದ ವಿದ್ಯಾರ್ಥಿಗಳ ಮೊಗದಲ್ಲಿ ಮಂದಹಾಸ ಮೂಡಿ, ಸಂತಸದಿಂದ ಶಿಕ್ಷಣ ಪಡೆಯುವಂತಾಗಲಿ..

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *