ಎನ್ ಎಸ್ ಪೈ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ.
ಬೆಳಗಾವಿ : ನಗರದ ಬಿ ಇ ಸಂಸ್ಥೆಯ ಎನ್ ಎಸ್ ಪೈ ಪ್ರಾಥಮಿಕ ಶಾಲೆಯಲ್ಲಿ ಅರ್ಥ ಪೂರ್ಣವಾಗಿ ವಿಶ್ವ ಪರಿಸರ ದಿನವನ್ನು ಆಚರಣೆ ಮಾಡಲಾಗಿದೆ.
ಜೊತೆಗೆ ಎನ್ ಎಸ್ ಪೈ ಶಾಲೆಯ 35ನೇ ಸಂಸ್ಥಾಪನಾ ದಿನಾಚರಣೆಯನ್ನೂ ಇದೇ ಸಂದರ್ಭದಲ್ಲಿ ಮಾಡಲಾಗಿದೆ.

ಶಾಲೆಯ ಉಸ್ತುವಾರಿಗಳು ಆದ ದೀಪಕ್ ಕುಲಕರ್ಣಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪರಿಸರದ ಮಹತ್ವದ ಬಗ್ಗೆ ಮಾತಾಡಿ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.
ಕನ್ನಡ ಮಾಧ್ಯಮದಲ್ಲಿ ಶಾಲೆಯು 35 ವರ್ಷ ಯಶಸ್ವಿ ಪಯಣ ಮಾಡಿದ್ದಕ್ಕೆ ಶುಭ ಕೋರಿದರು.
ಪ್ರಭಾರಿ ಮುಖ್ಯ ಶಿಕ್ಷಕಿಯರಾದ ದೀಪಾಲಿ ಕರಗುಪ್ಪಿಕರ್ ಕಾರ್ಯಕ್ರಮ ಸಂಯೋಜನೆ ಮಾಡಿದರು.
ಎಲ್ಲ ಶಿಕ್ಷಕರು ಮತ್ತು ಮಕ್ಕಳು ಉತ್ಸಾಹದಿಂದ ಪರಿಸರ ಅರಿವು ಜಾಥಾದಲ್ಲಿ ಭಾಗವಹಿಸಿ ಪರಿಸರ ಪ್ರಜ್ಞೆ ಪ್ರಸಾರ ಮಾಡಿದ್ದು ವಿಶೇಷವಾಗಿತ್ತು..
