ಬೆಳಗಾವಿ ನಗರಕ್ಕೆ ನೀರಿನ ಪೂರೈಕೆಯಲ್ಲಿ ಕೊರತೆ..
ಜಲಾಶಯಗಳಲ್ಲಿ ಕಡಿಮೆಯಾದ ನೀರಿನ ಮಟ್ಟ.
ಕೇವಲ ಹದಿನೈದು ದಿನಗಳಿಗೆ ಆಗುವಷ್ಟು ಮಾತ್ರ ನೀರು ಲಭ್ಯವಿದೆ..
ಶಶಿಕುಮಾರ ಹತ್ತಿ, ಕಾರ್ಯನಿರ್ವಾಹಕ ಅಭಿಯಂತರರು (ಪ್ರಭಾರ) (ಕನಮೂಅಹನಿ)..
ಬೆಳಗಾವಿ : ನಗರಕ್ಕೆ ಎರಡು ಕಡೆಗಳಿಂದ ಕುಡಿಯುವ ನೀರಿನ ಪೂರೈಕೆ ಆಗುತ್ತಿದ್ದು ಅವು ರಾಕಸಕೊಪ್ಪ ಹಾಗೂ ಹಿಡಕಲ್ ಜಲಾಶಯ ಆಗಿದ್ದು, ರಾಕಸಕೊಪ್ಪ ಜಲಾಶಯದಲ್ಲಿ ಈಗಾಗಲೇ ನೀರು ಪೂರ್ತಿ ಕೆಳಗಿಳಿದಿದೆ, ಪಾಯಿಂಟ್ 58 ಟಿಎಂಸಿ ಇದ್ದ ನೀರು ಈಗ 0.15 ಟಿಎಂಸಿಗೆ ಬಂದು ನಿಂತಿದೆ, ಈಗ ಬಹಳ ಅಂದ್ರೆ ಹತ್ತರಿಂದ ಹದಿನೈದು ದಿನ ಮಾತ್ರ ನಾವು ನಗರಕ್ಕೆ ನೀರು ಪೂರೈಕೆ ಮಾಡಬಹುದು ಎಂದು ಹೇಳಿದ್ದಾರೆ..
ಗುರುವಾರ ಪಾಲಿಕೆಯ ಪರಿಷತ ಸಭಾ ಭವನದಲ್ಲಿ ನಗರ ಸೇವಕರು ಹಾಗೂ ಪಾಲಿಕೆಯ ಅಧಿಕಾರಿಗಳು ನಡೆಸಿದ ಎಸ್ ಐ ಆರ್ ಸಭೆ ಮುಗಿದ ನಂತರ ನಗರದಲ್ಲಿ ಕುಡಿಯುವ ನೀರಿನ ಬಗ್ಗೆ ಮಾಹಿತಿ ನೀಡಿದ ಅವರು, ಕುಡಿಯುವ ನೀರಿನ ಕೊರತೆ ಇರುವದರಿಂದ ನಾವು ಪೂರೈಕೆಯಲ್ಲಿ ಕಡಿತ ಗೊಳಿಸಬೇಕಾಗಿದೆ. ವಾರಕ್ಕೆ ಒಂದುವರೇ ತಾಸು ಅಷ್ಟೇ ಪೂರೈಕೆ ಮಾಡಬೇಕೆಂದು ತೀರ್ಮಾನಿಸಿದ್ದು, 24×7 ಇದ್ದ ಕಡೆ 2ರಿಂದ 3 ತಾಸು ನೀರು ಪೂರೈಕೆ ಮಾಡುತ್ತೇವೆ ಎಂಬ ಮಾಹಿತಿ ನೀಡಿದ್ದಾರೆ.

ಇನ್ನು ನಗರದಲ್ಲಿ ಇರುವ 745 ಬೋರವೆಲ್ ಹಾಗೂ 68 ತೆರೆದ ಬಾವಿಗಳಿಗೆ ಅಳವಡಿಸಿದ ಯಂತ್ರೋಪಕರಣಗಳನ್ನು ಸುಸ್ಥಿತಿಯಲ್ಲಿ ಇಡಲಾಗಿದೆ, (ಬಳಕೆ ನೀರಿನ ಉಪಯೋಗಕ್ಕೆ) ಕುಡಿಯುವ ನೀರಿನ ಬಳಕೆಯನ್ನು ಮಿತವಾಗಿ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಕೇಳಿಕೊಂಡಿದ್ದಾರೆ..
ವರದಿ ಪ್ರಕಾಶ್ ಬಿ ಕೆ..