ಪಾಲಿಕೆಯ ಆರೋಗ್ಯ ವಿಭಾಗದಿಂದ ಗಣೇಶನಿಗೆ ವಿಶೇಷ ಪೂಜೆ..

ಪಾಲಿಕೆಯ ಆರೋಗ್ಯ ವಿಭಾಗದಿಂದ ಗಣೇಶನಿಗೆ ವಿಶೇಷ ಪೂಜೆ..

ಪೂಜೆಯಲ್ಲಿ ಭಾಗಿಯಾದ ಭಕ್ತರಿಗೆ ಪ್ರಸಾದದೊಂದಿಗೆ ವಿಶೇಷ ಉಡುಗೊರೆ..

ಬೆಳಗಾವಿ : ಗಣೇಶೋತ್ಸವದ ಅಂಗವಾಗಿ ಬೆಳಗಾವಿ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ವತಿಯಿಂದ ಎಂಟನೇ ದಿನವಾದ ಸೋಮವಾರದಂದು ವಿಘ್ನ ವಿನಾಯಕನಿಗೆ ಸಕಲ ವಿಧಿ–ವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಆರೋಗ್ಯ ವಿಭಾಗದ ಮುಖ್ಯಸ್ಥರಾದ ಹನಮಂತ ಕಲಾದಗಿ ಅವರ ನೇತೃತ್ವದಲ್ಲಿ ಆರೋಗ್ಯ ವಿಭಾಗದ ಎಲ್ಲ ಸಿಬ್ಬಂದಿಗಳು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ, ಭಕ್ತಿಭಾವದಿಂದ ಗಣಪತಿಗೆ ಪೂಜೆ ಸಲ್ಲಿಸಿದರು.

ಪೂಜಾ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಪೂಜಾ ವಿಧಿ–ವಿಧಾನಗಳನ್ನು ನೆರವೇರಿಸಿ, ವಿಘ್ನ ವಿನಾಯಕನಿಗೆ ವಿಶೇಷ ಆರಾಧನೆ ಮಾಡಲಾಯಿತು. ಪೂಜೆಯ ಬಳಿಕ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಆರೋಗ್ಯ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿಘ್ನ ವಿನಾಯಕನಲ್ಲಿ ಪ್ರಾರ್ಥಿಸಿ, ನಗರದ ಹಾಗೂ ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಆರೋಗ್ಯ ಕರುಣಿಸುವಂತೆ ವಿನಾಯಕನಲ್ಲಿ ಬೇಡಿಕೊಂಡರು.

ಗಣೇಶೋತ್ಸವದ ಹಿನ್ನೆಲೆಯಲ್ಲಿ ನಡೆದ ಈ ವಿಶೇಷ ಪೂಜಾ ಕಾರ್ಯಕ್ರಮವು ಭಕ್ತಿಭಾವದ ವಾತಾವರಣದಲ್ಲಿ ಮೊಳಗಿದ್ದು, ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸಿದರು.

ಪೂಜಾ ಕಾರ್ಯದಲ್ಲಿ ಭಾಗಿಯಾದ ಪಾಲಿಕೆಯ ಎಲ್ಲಾ ವಿಭಾಗದ ಸಿಬ್ಬಂದಿಗಳಿಗೆ ವಿಶೇಷ ಉಡುಗೊರೆ ನೀಡಿದ್ದು, ವಿಶೇಷ ತಿಂಡಿಗಳನ್ನು ಪ್ರಸಾದಕ್ಕೆ ಸಿದ್ದಪಡಿಸಿ, ಎಲ್ಲರೂ ಖುಷಿಯಿಂದ ಪ್ರಸಾದ ಸವಿಯುವ ಸನ್ನಿವೇಶವನ್ನು ಆರೋಗ್ಯ ವಿಭಾಗ ಸೃಷ್ಟಿ ಮಾಡಿತ್ತು.

ಸಾರ್ವಜನಿಕರ ಸೇವೆಯ ಜೊತೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಈ ವಿಶೇಷ ಪೂಜಾಕಾರ್ಯದಲ್ಲಿ ಪಾಲಿಕೆಯ ಉಪ ಮಹಾಪೌರಾರದ ಹನಮಂತ ಕೊಂಗಾಲಿ, ಉದ್ಯಮಿ ಮಹಾದೇವ ರಾಠೋಡ ಹಾಗೂ ನ್ಯಾಯವಾದಿಗಳು ಆಗಮಿಸಿದ್ದು ಪಾಲಿಕೆಯ ಆವರಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

ವರದಿ ಪ್ರಕಾಶ್ ಬಿ ಕೆ..