ಕನ್ನಡ ನಾಡಿನ ಇತಿಹಾಸ ಬಿಂಬಿಸಿದ ಗಣೇಶ ಮಂಟಪ..

ಕನ್ನಡ ನಾಡಿನ ಇತಿಹಾಸ ಬಿಂಬಿಸಿದ ಗಣೇಶ ಮಂಟಪ..

ಯುವಕ ಮಂಡಳಿಗೆ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸನ್ಮಾನ..

​ಬೆಳಗಾವಿ : ಖಾಸಬಾಗ್‌ನ ರೇಣುಕಾ ನಗರದ ‘ಬಾಲ ಗಣೇಶ ಯುವಕ ಮಂಡಳ’ವು ಈ ಬಾರಿಯ ಗಣೇಶ ಹಬ್ಬದ ಪ್ರಯುಕ್ತ, ತಮ್ಮ ಗಲ್ಲಿಯ ಗಣೇಶ ಮಂಟಪದಲ್ಲಿ ಕರ್ನಾಟಕದ ಭವ್ಯ ಇತಿಹಾಸವನ್ನು ಬಿಂಬಿಸುವ ಅದ್ಭುತ ಪ್ರಯತ್ನ ಮಾಡಿದೆ. ಇಂದಿನ ಯುವಪೀಳಿಗೆಯಲ್ಲಿ ನಾಡಿನ ಇತಿಹಾಸವನ್ನು ಜೀವಂತವಾಗಿಡುವ ಇವರ ಈ ಮಹತ್ಕಾರ್ಯ ಉಳಿದ ಗಲ್ಲಿಗಳಿಗೂ ಹಾಗೂ ಕನ್ನಡ ಭಾಷಿಕರಿಗೂ ಅತ್ಯುತ್ತಮ ಮಾದರಿಯಾಗಿದೆ.

​ಸಾಮಾಜಿಕ ಜಾಲತಾಣದ ಪೋಸ್ಟ್‌ನಿಂದ ಸ್ಫೂರ್ತಿಗೊಂಡ ‘ವಿಜಯ ಕರ್ನಾಟಕ ರಕ್ಷಣಾ ವೇದಿಕೆ’ಯ ಬೆಳಗಾವಿ ಜಿಲ್ಲಾ ಮಹಿಳಾ ಘಟಕದ ತಂಡವು, ಯುವಕ ಮಂಡಳದ ಈ ಶ್ಲಾಘನೀಯ ಕಾರ್ಯವನ್ನು ಗುರುತಿಸಿ ಅವರಿಗೆ ಸನ್ಮಾನಿಸುವ ಮೂಲಕ ಕೃತಜ್ಞತೆ ಸಲ್ಲಿಸಿತು.

​ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸ್ಮಿತಾ ಪೂಜಾರ, ಉಪಾಧ್ಯಕ್ಷೆ ಗೀತಾ ಜಿನಬಸಪ್ಪನವರ, ಕಾರ್ಯದರ್ಶಿ ಮಂಗಲಾ ಪಾಟೀಲ, ಬೆಳಗಾವಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರೇಷ್ಮಾ ಮಾಳವಿ ಹಾಗೂ ನಗರ ಘಟಕದ ಅಧ್ಯಕ್ಷೆ ಕಲ್ಪನಾ ಅರಕಸಾಲಿ ಅವರು ಉಪಸ್ಥಿತರಿದ್ದರು.