ಸಾರ್ವಜನಿಕರ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರ ಪಾತ್ರ ಮಹತ್ವದ್ದು..
ಪಾಲಿಕೆ ಆಯುಕ್ತ ಕಾರ್ತಿಕ್ ಎಂ.
ಬೆಳಗಾವಿ : ನಗರಗಳ ಸ್ವಚ್ಛತೆ ಹಾಗೂ ನಾಗರಿಕರ
ಆರೋಗ್ಯ ಕಾಪಾಡುವಲ್ಲಿ
ಪೌರಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ ಎಂದು
ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಹೇಳಿದರು
ಬುಧವಾರ ಮಹಾನಗರ ಪಾಲಿಕೆಯಿಂದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಆಯೋಜಿಸಿದ್ದ
ಪೌರಕಾರ್ಮಿಕರ ದಿನಾಚರಣೆ ಸಮಾರಂಭದ
ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
ಬಿಸಿಲು ಮಳೆ ಹಬ್ಬ ಹರಿದಿನಗಳನ್ನು ಲೆಕ್ಕಿಸದೆ
ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ
ಪೌರ ಕಾರ್ಮಿಕರ ಶ್ರಮದಿಂದಾಗಿ ನಾಗರಿಕರು ನಿಶ್ಚಿಂತರಾಗಿ ಆರೋಗ್ಯವಂತರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರು
ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿದ್ದಂತೆ ಎಂದ ಅವರು,
ಇಂತಹ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಕಾರ್ಮಿಕರು ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಸರ್ಕಾರ ವಸತಿ ಯೋಜನೆ ತರುತ್ತಿದೆ.
ಕಾರ್ಮಿಕರ ಖಾಯಮ್ಮಾತಿಯ ಪ್ರಕ್ರಿಯೆಗಳೂ ನಡೆದಿವೆ. ಮಹಾನಗರ ಪಾಲಿಕೆಯಿಂದ ಆರೋಗ್ಯ ವಿಮೆ ಸಹಿತ ವಿವಿಧ ಸೌಲಭ್ಯಗಳನ್ನು ನೀಡುತ್ತಿದ್ದು
ಪೌರ ಕಾರ್ಮಿಕರು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಇಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ
ಜಿಲ್ಲಾ ನಗರಾಭಿವೃದ್ಧಿ ಕೋಶದ .ಪಿ.ಡಿ. ಮಲ್ಲಿಕಾರ್ಜುನ ಕಲಾದಗಿ ಅವರು ಮಾತನಾಡಿ, ಎಲ್ಲರ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ನಿರ್ಲಕ್ಷ ಮಾಡದೆ ಆರೋಗ್ಯ ತಪಾಸಿಸಿಕೊಂಡು ಆರೈಕೆ ಮಾಡಿಕೊಳ್ಳಬೇಕು. ಸರ್ಕಾರ ಅನೇಕ ಸೌಕರ್ಯಗಳನ್ನು ನೀಡುತ್ತಿದ್ದು ಅವುಗಳನ್ನು ಪಡೆದುಕೊಂಡು ಕುಟುಂಬದ ಕಡೆಗೂ ಗಮನ ಹರಿಸಬೇಕೆಂದು ಹೇಳಿದರು.
ದರ್ಪಣ ರೋಟರಿ ಕ್ಲಬ್ ಅಧ್ಯಕ್ಷೆ ಡಾ. ಸ್ಪೂರ್ತಿ ಮಾಸ್ತಿಹೊಳಿ ಮಾತನಾಡಿ,
ದುಶ್ಚಟಗಳಿಂದ ದೂರವಿದ್ದು,
ಉತ್ತಮ ಆರೋಗ್ಯಕ್ಕಾಗಿ
ಸ್ವಚ್ಛತಾ ಕಾರ್ಯದಲ್ಲಿ ತೊಡಗುವಾಗ
ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕೆಂದು ಹೇಳಿದರು.
ರೋಟರಿ ಕ್ಲಬ್ ವತಿಯಿಂದ
ಪಿಡಿ ಮಲ್ಲಿಕಾರ್ಜುನ ಕಲಾದಗಿ ಹಾಗೂ ಆಯುಕ್ತ ಕಾರ್ತಿಕ್ ಎಂ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು
ನಡೆದ ಪೌರಕಾರ್ಮಿಕರು ಹಾಗೂ ಚಿಂದಿ ಆಯುವವರ
ಆರೋಗ್ಯ ತಪಾಸಣಾ ಶಿಬಿರಕ್ಕೆ ಮೇಯರ್ ಪ್ರೀತಿ ಕಾಮಕರ ಹಾಗೂ ಉಪಮೇಯರ ಹನುಮಂತ ಕೊಂಗಾಲಿ ಚಾಲನೆ ನೀಡಿದರು.
ಪಾಲಿಕೆ ಅಭಿಯಂತರರಾದ ಪ್ರವೀಣ, ಆದಿಲ್ ಖಾನ್,
ರೋಟರಿ ಪದಾಧಿಕಾರಿಗಳಾದ
ಪುಷ್ಪಾ ಪರ್ವತರಾವ್, ಸವಿತಾ ಹೆಬ್ಬಾರ್, ರಕ್ಷಾ ಉಪಾಧ್ಯಾಯ ಇತರರು ವೇದಿಕೆಯಲ್ಲಿದ್ದರು.
ಪಾಲಿಕೆ ಪರಿಸರ ವಿಭಾಗದ ಕಾರ್ಯಪಾಲಕ ಅಭಿಯಂತರ ಹನುಮಂತ ಕಲಾದಗಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಬಸವರಾಜ ಕುಪ್ಪಸಗೌಡ್ರ ನಿರೂಪಿಸಿ ವಂದಿಸಿದರು.
ಆರೋಗ್ಯ ತಪಾಸಣಾ ಶಿಬಿರಕ್ಕೆ ಕೆಎಲ್ಇ, ಮರಾಠಾ ಮಂಡಳ ಹಾಗೂ ಹ್ಯಾಪಿ ಹಾರ್ಟ್ ಫೌಂಡೇಶನ್ ಸಹಕಾರ ನೀಡಿದ್ದವು ಶಿಬಿರದಲ್ಲಿ 500ಕ್ಕೂ ಹೆಚ್ಚು ಪೌರಕಾರ್ಮಿಕರ ಆರೋಗ್ಯವನ್ನು ತಪಾಸಿಸಲಾಯಿತು.