ಬೆಳಗಾವಿಯಲ್ಲಿ ದಾಖಲೆ ಬರೆದ 2026ರ ಗಣೇಶ್ ವಿಸರ್ಜನೆ..
ಕಪಿಲೇಶ್ವರದ ಅವಳಿ ಹೊಂಡದಲ್ಲಿ 42 ಗಂಟೆಗಳ ಸುದೀರ್ಘ ವಿದಾಯ..
ಗಣೇಶ ವಿಸರ್ಜನೆಯಲ್ಲಿ ಪಾಲಿಕೆ ಸಿಬ್ಬಂದಿಗಳ ಶಿಸ್ತಿನ ಕರ್ತವ್ಯ..
ವಿವಿಧ ಇಲಾಖೆಗಳ ಸಾವಿರಾರು ಸಿಬ್ಬಂದಿಗಳಿಂದ ಅಚ್ಚುಕಟ್ಟಿನ ನಿರ್ವಹಣೆ..
ಬೆಳಗಾವಿ : ರಾಜ್ಯದಲ್ಲಿಯೇ ಅತೀ ಅದ್ದೂರಿಯಾಗಿ ಆಚರಣೆ ಆಗುವ ಬೆಳಗಾವಿಯ ಗಣೇಶೋತ್ಸವ, ಅದರ ಮುಂದಿನ ಭಾಗವಾದ ಗಣೇಶ ವಿಸರ್ಜನೆಯಲ್ಲಿಯೂ ದಾಖಲೆ ಬರೆದಿದೆ, ಕಪಿಲೇಶ್ವರದ ಅವಳಿ ಹೊಂಡಗಳಲ್ಲಿ 42 ಗಂಟೆಗಳ ಕಾಲ ಸುದೀರ್ಘ ಅವಧಿಯಲ್ಲಿ ನಿರಂತರವಾಗಿ ಸುಮಾರು 230ಕ್ಕಿಂತ ಹೆಚ್ಚು ಗಣಪತಿಗಳನ್ನು ವಿಸರ್ಜನೆ ಮಾಡುವ ಮೂಲಕ 2026 ರಲ್ಲಿ ಹೊಸ ದಾಖಲೆ ಬರೆದಂತಾಗಿದೆ.
ದಾಖಲೆ ಬರೆದ ಈ ವರ್ಷದ ಗಣೇಶ ವಿಸರ್ಜನೆಯ ಕೇಂದ್ರಬಿಂದುವಾದ, ನಗರದ ಕಪಿಲೇಶ್ವರದ ಎರಡೂ ಕೆರೆಗಳಲ್ಲಿ ಶುಕ್ರವಾರ ಸಂಜೆಯಿಂದಲೇ ಗಣೇಶ ವಿಸರ್ಜನೆಯ ಕಾರ್ಯ ನಡೆದಿದ್ದು, ಸಾರ್ವಜನಿಕ ಹಾಗೂ ಮನೆ ಮನೆಗಳಲ್ಲಿ ಕೂರುಸಿರುವ ನೂರಾರು ಗಣಪತಿಗಳು ಈ ಅವಳಿ ಹೊಂಡಗಳಲ್ಲಿ ವಿಸರ್ಜನೆ ಮಾಡಿದ್ದು, ಪಾಲಿಕೆ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ಅತೀ ಅಚ್ಚುಕಟ್ಟಾಗಿ, ಶಿಸ್ತಿನಿಂದ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ.

ಬೆಳಗಾವಿಯಲ್ಲಿ ಅದ್ದೂರಿಯಾಗಿ ಗಣೇಶೋತ್ಸವ ಆಚರಣೆ ಮಾಡಿದ್ದು, ಗಣೇಶ ವಿಸರ್ಜನೆಗಾಗಿ ನಗರದ ಮುಖ್ಯ ಹೊಂಡಗಳು ಎಂದಲೇ ಕರೆಸಿಕೊಳ್ಳುವ ಕಪಿಲೇಶ್ವರದ ಅವಳಿ ಹೊಂಡಗಳಲ್ಲಿ ಗಣೇಶ ವಿಸರ್ಜನೆಗೆ ಹಾಗೂ ವಿಸರ್ಜನೆ ನೋಡಲು ಬರುವ ಭಕ್ತರ ಸಂಖ್ಯೆ ಸಹಸ್ರಾರು ಇರುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕರ್ತವ್ಯನಿರತ ಸಿಬ್ಬಂದಿಗಳು ತಮ್ಮ ಕಾರ್ಯ ಮಾಡಿದ್ದು ಸಂತಸವೇನಿಸಿದೆ.
ಬೆಳಗಾವಿ ಪಾಲಿಕೆಯ, ನಗರ ನೀರು ಸರಬರಾಜು ಪೊಲೀಸ್, ಅಗ್ನಿಶಾಮಕ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಹೀಗೆ ಹಲವು ಇಲಾಖೆಗಳ ಸಿಬ್ಬಂದಿಗಳು ತಮ್ಮ ಸೇವೆಯಲ್ಲಿ ನಿರತರಾಗಿದ್ದು, ಸಾರ್ವಜನಿಕರಿಗೆ ಸುರಕ್ಷತೆಯ ಬಗ್ಗೆ ಮಾಹಿತಿ ನೀಡುವದು, ಸರಿಯಾದ ವಿಸರ್ಜನೆಗಾಗಿ ಸಲಹೆ ಸೂಚನೆಗಳನ್ನು ನೀಡುವದು, ನಿರಂತರವಾಗಿ ಹೊಂಡವನ್ನು ಸ್ವಚ್ಛ ಇರುವಂತೆ ನೋಡಿಕೊಳ್ಳುವದು, ವಿಸರ್ಜನಾ ಪರಿಣಿತರಿಗೆ ಸುರಕ್ಷಾ ಸಲಕರಣೆ ವಿತರಣೆ ಮಾಡುವದು ಹೀಗೆ ಹಲವಾರು ಕಾರ್ಯಗಳನ್ನು ಶಿಸ್ತಿನಿಂದ ನಿರ್ವಹಣೆ ಮಾಡಿ ಸನ್ನಿವೇಶ ಸಾಮಾನ್ಯವಾಗಿತ್ತು.

ಸಾರ್ವಜನಿಕರು ಇದ್ದಲ್ಲಿಯೇ ಹೋಗಿ, ಅವರ ಸುರಕ್ಷಾಕ್ಷಿ ವಿಸರ್ಜನೆಗಾಗಿ ತಿಳಿ ಹೇಳುವದು, ದೊಡ್ಡದಾದ ಗಣಪತಿಗಳು ಬಂದಾಗ ವಾಹನಗಳ ಸಂಚಾರಕ್ಕೆ ಅನುವು ಮಾಡಿ ಕೊಟ್ಟು, ಕ್ರೇನಗಳ ಸಹಾಯದಿಂದ ಗಣೇಶನ ವಿಸರ್ಜನೆ ಮಾಡುವದು, ಪ್ರತಿ ಹಂತದಲ್ಲಿಯೂ ಸಾರ್ವಜನಿಕರ ಬೆನ್ನಿಗೆ ನಿಂತು ಕೆಲಸ ಮಾಡುತ್ತಿರುವದು ಕಂಡರೆ ಎಷ್ಟೇ ಗದ್ದಲ ಹಾಗೂ ಜನಸಂದನಿ ಇದ್ದರೂ ನಾವು ವ್ಯವಸ್ಥಿತವಾಗಿ ನಿರ್ವಹಣೆ ಮಾಡುತ್ತೇವೆ ಎಂಬ ಸಂಕೇತದಂತಿತ್ತು..

ಒಟ್ಟಿನಲ್ಲಿ ಲಕ್ಷಾಂತರ ಜನರು ಸೇರುವ ಈ ಬೆಳಗಾವಿಯ ಗಣೇಶ ವಿಸರ್ಜನೆ ಕಾರ್ಯದಲ್ಲಿ ವಿವಿಧ ಇಲಾಖೆಗಳ ಸಾವಿರಾರು ಸಿಬ್ಬಂದಿಗಳು ಅತೀ ಅಚ್ಚುಕಟ್ಟಾಗಿ ಶಿಸ್ತಿನಿಂದ ತಮ್ಮ ಕರ್ತವ್ಯ ನಿರ್ವಹಣೆ ಮಾಡಿದ್ದು, ಶಾಂತಿ, ಯಶಸ್ವಿ ಹಾಗೂ ಸುರಕ್ಷಿತ ರೀತಿಯಲ್ಲಿ ಈ ಗಣೇಶ ವಿಸರ್ಜನೆಯ ಕಾರ್ಯ ನೆರವೇರಿಸಿರುವದು ಮೆಚ್ಚುಗೆಯ ಸಂಗತಿ..
ವರದಿ ಪ್ರಕಾಶ್ ಬಿ ಕೆ..