ಮಾರಿಹಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸಭೆ..
ಗ್ರಾಮೀಣ ಜನತೆಯ ಆರ್ಥಿಕ ಸಬಲೀಕರಣದ ಜೊತೆ 72 ಲಕ್ಷ ವಾರ್ಷಿಕ ಲಾಭ..
ಮಲ್ಲಿಕಾರ್ಜುನ ಮಾದಮ್ಮನವರ, ಅಧ್ಯಕ್ಷರು ಪ್ರಾಕೃಪಸಸಂ ಮಾರಿಹಾಳ..
ಬೆಳಗಾವಿ : ಕೃಷಿಕಾಯಕದ ಅಭಿವೃದ್ದಿ ಗೋಸ್ಕರ ನಾಲ್ಕು ಗ್ರಾಮದ ರೈತರಿಗಾಗಿ ಸ್ಥಾಪಿತವಾದ ಮಾರಿಹಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪ್ರಸಕ್ತ ಸಾಲಿನಲ್ಲಿ 119ಕೋಟಿ ರೂಪಾಯಿ ವ್ಯವಹಾರ ನಡೆಸಿ ಸುಮಾರು 71ಲಕ್ಣ 60ಸಾವಿರ ರೂಪಾಯಿ ಲಾಭ ಗಳಿಸುವದರೊಂದಿಗೆ ಗ್ರಾಮಿಣ ಪ್ರದೇಶದದ ರೈತರಿಗೆ ಕೂಲಿ ಕಾರ್ಮಿಕರಿಗೆ ಆರ್ಥಿಕ ಸಬಲಿಕರಣದ ಜೊತೆಗೆ ಅತ್ಯುತ್ತಮ ಸೇವೆ ನೀಡುತ್ತಿದೆ ಎಂದು ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ ಹೇಳಿದರು.
ಸಮೀಪದ ಮಾರಿಹಾಳ ಗ್ರಾಮದ ಸಭಾ ಭವನದಲ್ಲಿ ರವಿವಾರದಂದು ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 83 ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಕಳೆದ ಸಾಲಿನಲ್ಲಿ ಸಂಘ 101 ಕೋಟಿ ವಹಿವಾಟು ನಡೆಸಿದರೆ 25-26ನೇ ಸಾಲಿನಲ್ಲಿ ವರ್ಷ 119 ಕೋಟಿ ವಹಿವಾಟ ಮಾಡಿದ್ದು ಮತ್ತು ರೈತ ಸದಸ್ಯರ ಪತ್ತಿನ ಸಾಲ 5.80 ಕೋಟಿ ಇದ್ದ ಸಾಲ ಪ್ರಸಕ್ತಸಾಲಿನಲ್ಲಿ 7.28 ಕೊಟಿ ಸಾಲದ ಜೋತೆಗೆ ಸ್ವಂತ ಬಂಡವಾಳದಲ್ಲಿ ಸಂಘದ ಸದಸ್ಯರಿಗೆ ಈ ವರ್ಷ 35 ಕೋಟಿ 67 ಲಕ್ಷ ರೂಪಾಯಿ ಸಾಲವಿತರಿಸಲಾಗಿದೆ.

ಹೊಸದಾಗಿ 226 ರೈತ ಸದಸ್ಯರನ್ನಾಗಿ ಮಾಡಲಾಗಿದ್ದು, ಸಂಘದ ದುಡಿಯೋ ಬಂಡವಾಳ 51 ಕೋಟಿ ಇದ್ದು ಇದಕ್ಕೆ ಸಹಕಾರ ನೀಡುತ್ತಿರುವ ಸಂಘದ ಸದಸ್ಯರ ಸಹಕಾರ ಮತ್ತು ಸಂಘದ ಸಿಬ್ಬಂದಿ ವರ್ಗ ಹಾಗೂ ಸಂಘದ ಆಡಳಿತ ಮಂಡಳಿಯ ಸಹಕಾರದಿಂದ 71.60ಲಕ್ಷ ರೂಪಾಯಿ ಲಾಭಂಶದಲ್ಲಿ ಶೇ10ರಷ್ಟು ಶೇರುದಾರರಿಗೆ ಡಿವಿಡೆಂಟ್ ನೀಡಲಾಗುವದು ಎಂದರು.
ಪ್ರಸಕ್ತ ಸಾಲಿನಿಂದ ಸಂಘದ ಸದಸ್ಯರು ಅಕಾಲಿಕ ಅಥವಾ ವಯೋಜಹಜ ಮರಣ ಹೊಂದಿದಲ್ಲಿ ಅವರ ಮನೆಯವರಿಗೆ 5 ಸಾವಿರ ರೂಪಾಯಿಗಳನ್ನು ಅಂತ್ಯಸಂಸ್ಕಾರ ನಿಧಿ ನೀಡಲಾಗುವದು. ಸಂಘದ ಸದಸ್ಯರ ಮಕ್ಕಳು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 85% ಕ್ಕಿಂತ ಹೆಚ್ಚಿಗೆ ಮಾರ್ಕ್ಸ್ ಗಳನ್ನು ತೆಗೆದುಕೊಂಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಸತ್ಕಾರ ನಡೆಸಲಾಗುವದು.

ಪ್ರತಿ ಸದಸ್ಯರು 360 ರೂಪಾಯಿ ಇನ್ಸೂರೆನ್ಸ್ ಪಾಲಿಸಿ ಮಾಡಿಸಿದಲ್ಲಿ ನಾಲ್ಕರಿಂದ ಆರು ಲಕ್ಷದವರೆಗೆ ಆಕ್ಸಿಡೆಂಟಲ್ ಪರಿಹಾರ ಸಿಗಲಿದೆ ಎಂದರು. ಸಂಘದಿಂದ ಪ್ರತಿವರ್ಷದಂತೆ ಕಣ್ಣಿನ ಉಚಿತ ತಪಾಸನೆಯನ್ನು ಸಂಘದ ಕಾರ್ಯಲಯದಲ್ಲಿ ಹಮ್ಮಿಕೊಳ್ಳಲಾಗುವದು ಎಂದರು.
ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ಸಂಘದ ಉಪಾಧ್ಯಕ್ಷ ಮಹದೇವ ಧನಾಯಿ, ಈಶ್ವರಪ್ಪ ವಾಲಿಶೆಟ್ಟಿ, ಬಾಳೇಶ ಹುಂಕ್ರಿ ಪಾಟೀಲ್, ರಾಮನಗೌಡ ಪಾಟೀಲ್, ಬಸಪ್ಪ ಕೆಂಚನವರ್ ಅಗಮಿಸಿದ್ದರು. ವೇದಿಕೆಯ ಮೇಲೆ ಸಂಘದ ನಿರ್ದೇಶಕರಾದ ಶಂಕರಗೌಡ ನಿರ್ವಾಣಿ, ಸಮೀರ ಮುಲ್ಲಾ, ಕಲಗೌಡ ಅಗಸಗಿ, ರಾಮಪ್ಪ ಹಣ್ಣೂರು, ಗುರುರಾಜ ಅಕ್ಕತಂಗಿಯರಹಾಳ, ಸವಿತಾ ಧರ್ಮೋಜಿ, ಗಿರಿಜಾ ಪಾಟೀಲ, ವಿನೋದ ಚವ್ಹಾಣ, ಸುನಂದಾ ಪೂಜಾರಿ ಉಪಸ್ಥಿತಿರಿದ್ದರು.

ಸಂಘದ ಸಿಇಓ ರುದ್ರಪ್ಪ ಚನ್ನನವರ ವಾರ್ಷಿಕ ವರದಿ ಮಂಡಿಸಿದರು. ಸ್ವಾಗತವನ್ನು ಸಂಘದ ನಿರ್ದೇಶಕ ಸಂಜಯ ಚಾಟೆ ಸ್ವಾಗತಿಸಿದರು.
ವಾರ್ಷಿಕ ಮಹಾಸಭೆಯಲ್ಲಿ ಅಪ್ಪಣ್ಣ ಹಿತ್ತಲಮನಿ, ವಿಠಲ ಮಲ್ಲಾರಿ, ಚನಬಸಪ್ಪ ರಾಚನ್ನವರ, ವಿಠಲ ಬಂಗೆಣ್ಣವರ, ದಸ್ತಗೀರ ನದಾಫ, ವಿನೋದ ಪಾಶ್ಚಾಪೂರ, ಅಜ್ಜಪ್ಪ ಕೋಟಿ, ಸಿದ್ದಪ್ಪ ಬುರ್ಲಿ ಸೇರಿದಂತೆ ಮಾರಿಹಾಳ, ಕರಡಿಗುದ್ದಿ, ಯದ್ದಲಭಾವಿಹಟ್ಟಿ ಹಾಗೂ ಸುಳೆಭಾವಿ ಗ್ರಾಮದ ನೂರಾರು ಸಂಘದ ಸದಸ್ಯರು ಇದ್ದರು.