ಕಲಿತ ಶಾಲೆಗೆ, ಕೃತಜ್ಞತೆ ತೋರಿದ ಬೆಳಗಾವಿ ಮೇಯರ..
ವಿದ್ಯೆ ನೀಡಿದ ಶಿಕ್ಷಕರಿಗೆ ಗುರುವಂದನೆ ಆಯೋಜಿಸಿದ ಮಹಾಪೌರಾರು..
ಬೆಳಗಾವಿ : “ಗುರುಬ್ರಹ್ಮ, ಗುರುವಿಷ್ಣು, ಗುರು ದೇವೋ ಮಹೇಶ್ವರಹ, ಗುರು ಸಾಕ್ಷ್ಯತ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ” ಎನ್ನುವಂತೆ ವಿದ್ಯೆ ಕಲಿಸಿದ ಗುರುಗಳಿಗೆ ಗುರುವಂದನಾ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ, ತಾವು ಕಲಿತ ಶಾಲೆಗೆ ಹಾಗೂ ವಿದ್ಯೆ ಕಲಿಸಿದ ಶಿಕ್ಷಕರಿಗೆ ಕೃತಜ್ಞತೆ ತೋರುವ ಕಾರ್ಯವನ್ನು ಬೆಳಗಾವಿ ಪಾಲಿಕೆಯ ಮೇಯರ್ ಪ್ರೀತಿ ವಿನಾಯಕ ಕಾಮಕರ ಅವರು ಮಾಡಿದ್ದಾರೆ.

ರವಿವಾರ ದಿನಾಂಕ 27/09/2026 ರಂದು ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಖ್ಯೆ 17ರಲ್ಲಿ, 2001ರ ಏಳನೇ ತರಗತಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರನವನ್ನು ಆಯೋಜನೆ ಮಾಡಿದ್ದು, 25 ವರ್ಷಗಳ ನಂತರ ಶಾಲೆಯ ಹಳೆಯ ಸ್ಬೇಹಿತರು ಮತ್ತೆ ಒಂದಾಗಿ ಅವರ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಸಂಭ್ರಮದಲ್ಲಿ ಇದ್ದರು.

ತಮ್ಮ ವಿದ್ಯಾರ್ಥಿ ಜೀವನದ ಬಾಲ್ಯದ ಹೆಜ್ಜೆಗಳು, ನೆನಪುಗಳು, ಆಟ ಪಾಠಗಳು, ಸ್ನೇಹಿರೊಂದಿಗೆ ಕಳೆದ ಸಿಹಿ ಕಹಿ ಘಟನೆಗಳು ಹಾಗೂ ಶಿಕ್ಷಕರು ಬೋದಿಸಿದ ಪಾಠಗಳು, ತಿದ್ದಿದ ತಪ್ಪುಗಳು, ತೋರಿದ ಮಾರ್ಗದರ್ಶನ, ನಿರ್ಮಿಸಿದ ವ್ಯಕ್ತಿತ್ವ ಹೀಗೆ ಎಲ್ಲಾ ನೆನಪುಗಳನ್ನು ಮೆಲುಕು ಹಾಕಿ, ತಮ್ಮ ಭವಿಷ್ಯವನ್ನು ಬೆಳಗಿಸಿದ ಗುರುಗಳಿಗೆ ಗುರುವಂದನೆಗಳನ್ನು ಸಮರ್ಪಿಸುವ ಸುವರ್ಣಾವಕಾಶದ ಸುದೀನದಲ್ಲಿ ಎಲ್ಲಾ ಸ್ನೇಹಿತರು ಮುಳುಗಿದ್ದರು.

ವಿದ್ಯೆ ಕಲಿಸಿದ ಗುರುಗಳಿಗೆ ಗೌರವದ ಸನ್ಮಾನ ಮಾಡುವ ಮೂಲಕ ವಿದ್ಯಾರ್ಥಿಗಳು ಗುರುಗಳಿಗೆ ತಮ್ಮ ಕೃತಜ್ಞತೆ ತೋರಿದ್ದು ತಮ್ಮ ವಿದ್ಯಾರ್ಥಿಗಳ ಈ ಸಂಭ್ರಮದ ಕಾರ್ಯಕ್ರಮಕ್ಕೆ ಶಿಕ್ಷಕರು ಕೂಡಾ ಸಂತಸಗೊಂಡಿದ್ದು, ತಾವು ಕಲಿಸಿದ ವಿದ್ಯಾರ್ಥಿನಿಯೊಬ್ಬರು ಇಂದು ಬೆಳಗಾವಿಯ ಪ್ರಥಮ ಪ್ರಜೆ (ಮೇಯರ) ಆಗಿದ್ದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ ಎಂದು ಸಂತಸದಲ್ಲಿ ಮೇಯರ ಪ್ರೀತಿ ಕಾಮಕರ ಅವರಿಗೆ ಪ್ರೀತಿಯ ಸತ್ಕಾರ ಮಾಡುದ್ದು ವಿಶೇಷವಾಗಿತ್ತು.
ವರದಿ ಪ್ರಕಾಶ್ ಬಿ ಕೆ…