ಕರ್ತವ್ಯಲೋಪದ ಆರೋಪ: ಲೋಕಾಯುಕ್ತಕ್ಕೆ ದೂರು..
ಬೆಳಗಾವಿ: ಕರ್ತವ್ಯಲೋಪದ ಆರೋಪಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆ ಯುಪಿಎಲ್ಒಕೆ–2 ವ್ಯಾಪ್ತಿಯಲ್ಲಿ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.
ಬೆಳಗಾವಿ ತಾಲೂಕಿನ ಮುಚಂಡಿ ಗ್ರಾಮದ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಲಕ್ಷ್ಮಣ ದಶರಥ ಕೊಲ್ಕಾರ ಅವರು ಸೆಪ್ಟೆಂಬರ್ 17, 2026ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಪ್ರಕರಣಕ್ಕೆ COMPT/UPLOK/BGM/16861/2026 ಸಂಖ್ಯೆ ನೀಡಲಾಗಿದೆ.

ದೂರಿನಲ್ಲಿ ಬೆಳಗಾವಿ ಎಡಿಎಲ್ಆರ್ ಕಚೇರಿಯ ಸಿಬ್ಬಂದಿ, ಭೂ ದಾಖಲೆ ಇಲಾಖೆಯ ಪರವಾನಗಿ ಪಡೆದ ಸರ್ವೇಯರ ಹಾಗೂ ಬೆಳಗಾವಿ ತಹಶೀಲ್ದಾರ ಕಚೇರಿಯ ಭೂಮಿ ವಿಭಾಗದ ಗ್ರಾಮ ಲೆಕ್ಕಿಗ ಅವರನ್ನು ಈ ಪ್ರಕರಣದಲ್ಲಿ ಪ್ರತಿವಾದಿಗಳಾಗಿ ಉಲ್ಲೇಖಿಸಲಾಗಿದೆ.
ಈ ದೂರು ಕರ್ತವ್ಯಲೋಪ (Dereliction of Duty) ಎಂಬ ಆರೋಪದಡಿ ದಾಖಲಾಗಿದ್ದು, ವಿಚಾರಣೆಗೆ ARLO-2, ಬೆಳಗಾವಿ ಅವರಿಗೆ ಹಂಚಿಕೆ ಮಾಡಲಾಗಿದೆ. ಪ್ರಕರಣದ ಕುರಿತು ಲೋಕಾಯುಕ್ತ ಕಚೇರಿಯಲ್ಲಿ ಪರಿಶೀಲನೆ ಹಾಗೂ ಮುಂದಿನ ಕ್ರಮ ನಡೆಯಬೇಕಿದೆ.
(ಸೂಚನೆ: ದಾಖಲೆದಲ್ಲಿರುವುದು ಆರೋಪ/ದೂರು ಮಾತ್ರವಾಗಿದ್ದು, ಆರೋಪಗಳು ಸಾಬೀತಾಗಿವೆ ಎಂಬ ಅರ್ಥವಲ್ಲ.)