ಹಸ್ತಕಲಾ ಕಲಾಕರರಿಗೆ ಪ್ರೋತ್ಸಾಹ ನೀಡಲು ಜನತೆ ಮುಂದಾಗಲಿ..

ಹಸ್ತಕಲಾ ಕಲಾಕರರಿಗೆ ಪ್ರೋತ್ಸಾಹ ನೀಡಲು ಜನತೆ ಮುಂದಾಗಲಿ..

ಶಾಸಕ ಆಸಿಫ್ ಸೇಠ್..

ಬೆಳಗಾವಿ : ದೇಶದ 20ಕ್ಕೂ ಹೆಚ್ಚು ರಾಜ್ಯಗಳ ವಿವಿಧ ಭಾಗಗಳಿಂದ ಆಗಮಿಸಿರುವ ಹಸ್ತಕಲಾ ಕಲಾಕಾರರಿಗೆ ವೈವಿಧ್ಯಮಯ ಉತ್ಪನ್ನಗಳನ್ನು ಒಳಗೊಂಡ ‘ಇಂಡಿಯನ್ ದಸ್ತಕಾರ ಹ್ಯಾಂಡ್‌ಲೂಮ್ ಹಾಗೂ ಹ್ಯಾಂಡಿಕ್ರಾಫ್ಟ್ ಹಾಟ್’ ಪ್ರದರ್ಶನವನ್ನು ಬೆಳಗಾವಿಯ ಸದಾಶಿವನಗರದಲ್ಲಿ ಆಯೋಜಿಸಲಾಗಿದೆ.

ಹಸ್ತಕಲಾಕಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆಯೋಜಿಸಿರುವ ಈ ಪ್ರದರ್ಶನದಲ್ಲಿ ವಿವಿಧ ರಾಜ್ಯಗಳ ವಿಶಿಷ್ಟ ಕೈಮಗ್ಗ ಹಾಗೂ ಕರಕುಶಲ ಉತ್ಪನ್ನಗಳು ಲಭ್ಯವಿದ್ದು, ಬೆಳಗಾವಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಕಲಾಕಾರರನ್ನು ಪ್ರೋತ್ಸಾಹಿಸಬೇಕು ಎಂದು ಉತ್ತರ ಕ್ಷೇತ್ರದ ಶಾಸಕ ಆಸಿಫ್ ರಾಜು ಸೇಠ್ ಅವರು ಕರೆ ನೀಡಿದರು.

ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ವಿವಿಧ ಭಾಗಗಳ ಸಾಂಪ್ರದಾಯಿಕ ಕಲೆ, ಕೈಮಗ್ಗ ಹಾಗೂ ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವ ಇಂತಹ ಪ್ರದರ್ಶನಗಳು ಕಲಾಗಾರರಿಗೆ ಜೀವನೋಪಾಯಕ್ಕೆ ನೆರವಾಗಲಿವೆ ಎಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಇಂಡಿಯನ್ ದಸ್ತಕಾರ ಹ್ಯಾಂಡ್‌ಲೂಮ್‌ನ ನಿರ್ದೇಶಕ ಅಹ್ಮದ್ ಖಾನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *