ಪಾಲಿಕೆಯಿಂದ ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ…

ಪಾಲಿಕೆಯಿಂದ ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ…

ಬೆಳಗಾವಿ : ನಗರದ ಕೆಪಿಟಿಸಿಎಲ್ ಹಾಗೂ ಜೆಎನ್ಎಂಸಿ ರಸ್ತೆಯಲ್ಲಿ
ಮಹಾನಗರ ಪಾಲಿಕೆಯಿಂದ
ಪುಟ್ ಪಾತ್ ಹಾಗೂ ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಲಾಯಿತು.

ಸಂಚಾರ ದಟ್ಟಣೆ ಹಾಗೂ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತ
ಕಾರ್ತಿಕ್ ಎಂ. ಅವರ ಮಾರ್ಗದರ್ಶನದಲ್ಲಿ
ಪಾಲಿಕೆಯ ಕಂದಾಯ, ಆರೋಗ್ಯ, ಅಭಿವೃದ್ಧಿ ಸೇರಿದಂತೆ ಇತರೆ ವಿಭಾಗಗಳ ಅಧಿಕಾರಿಗಳ ತಂಡ
ಅಂಗಡಿಕಾರರಿಗೆ ಎಚ್ಚರಿಕೆ ನೀಡಿದರಲ್ಲದೆ ಅತಿಕ್ರಮಿತ ವಸ್ತುಗಳನ್ನು ಸಿಬ್ಬಂದಿಯಿಂದ ತೆರವು ಗೊಳಿಸಲಾಯಿತು.

ಕೆಲವು ಅಂಗಡಿಕಾರರ ಮನವಿಗೆ ಸ್ಪಂದಿಸಿ ಸ್ವಯಂ ತರವಿಗೆ ಗಡವು ನೀಡಲಾಯಿತು.
ಮತ್ತೆ ಮುಂದುವರೆದರೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂಬ ಎಚ್ಚರಿಕೆ ನೀಡಲಾಯಿತು.
ಪಾಲಿಕೆಯ ನಗರ ಯೋಜನೆ ವಿಭಾಗದ ಅಧಿಕಾರಿ ವಾಹಿದ್ ಅಕ್ತರ, ಉತ್ತರ ವಲಯ ಆಯುಕ್ತ ಅನೀಲ ಬೋರಗಾವಿ, ಅಭಿಯಂತರುಗಳಾದ
ದೇಶಪಾಂಡೆ, ಅನೂಪ ಕನೋಜ, ಆದಿಲ್ ಖಾನ, ಸಂಜಯ ಪಾಟೀಲ್, ಸಾಗರ ಕಾಂಬ್ಳೆ, ಲಕ್ಷ್ಮಣ ದ್ಯಾವಣ್ಣವರ, ಸೇರಿದಂತೆ ಇತರೆ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *