ಬೆಳಗಾವಿ : ತಹಸಿಲ್ದಾರ ಹಾಗೂ ತಾಲೂಕು ದಂಡಾಧಿಕಾರಿ ಬೆಳಗಾವಿ ಇವರ ಅಧ್ಯಕ್ಷತೆಯಲ್ಲಿ ಬುಧವಾರಬೆಳಗಾವಿ ತಾಲೂಕಿನ ಮತಗಟ್ಟೆ ಮಟ್ಟದ ಅಧಿಕಾರಿಗಳು 13 – ಬೆಳಗಾವಿ ವಿಧಾನ ಸಭೆ ಮತಕ್ಷೇತ್ರದ ಮತದಾರ ತೀವ್ರ ಪರಿಷ್ಕರಣಿ-2026 ಕಾರ್ಯದಲ್ಲಿ ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸಿದ ಮತಗಟ್ಟೆ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಗಿದೆ.
1) ಶ್ರೀದೇವಿ ಕುಲಕರ್ಣಿ ಮತಗಟ್ಟೆ ಮಟ್ಟದ ಅಧಿಕಾರಿ ಮತಗಟ್ಟೆ ಸಂಖ್ಯೆ-262, ಕಲಾರಕೊಪ್ಪ-ಬಾಗೇವಾಡಿ,
2) ಸರೋಜನಿ ಚಂದ್ರಗೌಡಾ ಫಡಿಪಾಟೀಲ ಮತಗಟ್ಟೆ ಮಟ್ಟದ ಅಧಿಕಾರಿ ಮತಗಟ್ಟೆ ಸಂಖ್ಯೆ-258 ಹಿರೇಬಾಗೇವಾಡಿ..
3)ಸಂಗೀತಾ ದುಂಡಪ್ಪ ಹುಬ್ಬಳ್ಳಿ ಮತಗಟ್ಟೆ ಮಟ್ಟದ ಅಧಿಕಾರಿ ಮತಗಟ್ಟೆ ಸಂಖ್ಯೆ-276 ಮುತ್ನಾಳ. 4)ಈರವ್ವಾ ಸಿದ್ದನ್ನ ಅಕ್ಕನ್ನವರ ಮತಗಟ್ಟೆ ಮಟ್ಟದ ಅಧಿಕಾರಿ ಮತಗಟ್ಟೆ ಸಂಖ್ಯೆ-253 ಹುಲಿಕಟ್ಟಿ ಮತಗಟ್ಟೆ ಅಧಿಕಾರಿಗಳನ್ನು ತಹಶೀಲ್ದಾರ್ ಕಾರ್ಯಾಲಯ ಬೆಳಗಾವಿಯಲ್ಲಿ ಸನ್ಮಾನಿಸಲಾಯಿತು.
ಈ ವೇಳೆ ಬೆಳಗಾವಿ ತಹಶೀಲ್ದಾರ ಹಾಗೂ ತಾಲೂಕು ದಂಡಧಿಕಾರಿಗಳಾದ ಹನಮಂತ ಶಿರಹಟ್ಟಿ ಅವರು ಮಾತನಾಡಿ, ಈ ಚುನಾವಣಾ ಕಾರ್ಯಗಳಾದ ಪ್ರೊಜನಿ, ಮ್ಯಾಪಿಂಗ್ ಹಾಗೂ ಈಗಿನ ಎಸ್ ಐ ಆರ್ ಪ್ರಕ್ರಿಯೆಗಳು ದೇಶದ ಪ್ರಮುಖ ಮತ್ತು ಅತೀ ಅವಶ್ಯಕ ಕಾರ್ಯಗಳಾಗಿದ್ದು ಇದರಲ್ಲಿ ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸಿದ ಬಿಎಲ್ಓ ಗಳಿಗೆ ನಮ್ಮ ತಾಲೂಕು ಕಚೇರಿಯಿಂದ ಅಭಿನಂದನೆಗಳು, ಜೊತೆಗೆ ಉಳಿದ ಬಿಎಲ್ಓ ಈ ಸಾಧಕರನ್ನೇ ಮಾದರಿಯಾಗಿ ಮಾಡುಕೊಂಡು, ಮತದಾರರ ಪಟ್ಟಿಯ ಈ ತೀವ್ರ ಪರಿಷ್ಕರಣೆಯ ಸೂಕ್ಷ್ಮ ಕಾರ್ಯದಲ್ಲಿ ತಾವು ಯಶಸ್ವಿ ಆಗಿ, ದೇಶ ಕಟ್ಟುವ ಈ ಮಹಾನ ಕಾರ್ಯದಲ್ಲಿ ಪಾಲುದಾರರಾಗಿ ಎಂದು ಸಂದೇಶ ನೀಡಿದರು..
ವರದಿ ಪ್ರಕಾಶ ಬಿ ಕೆ..