ಎಸ್ಐಆರ್, ಹೆಚ್ಚು ಇ.ಎಫ್ ಡಿಜಿಟಲೈಜೇಷನ್ ಮಾಡಿದ ಬಿಎಲ್ಓಗಳಿಗೆ ಸನ್ಮಾನ…

ಎಸ್ಐಆರ್, ಹೆಚ್ಚು ಇ.ಎಫ್ ಡಿಜಿಟಲೈಜೇಷನ್ ಮಾಡಿದ ಬಿಎಲ್ಓಗಳಿಗೆ ಸನ್ಮಾನ…

ಬೆಳಗಾವಿ : ಮಹಾನಗರ ಪಾಲಿಕೆ ವ್ಯಾಪ್ತಿಯ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 257 ಮತಗಟ್ಟೆಗಳಿದ್ದು, ಎಸ್ಐಆರ್ ಪ್ರಕ್ರಿಯೆ ಆರಂಭವಾಗಿ ಬಿಎಲ್ಓ ಗಳು ಮನೆಮನೆಗೆ ಹೋಗಿ ಈಗಾಗಲೇ ಶೇ.90ರಷ್ಟು ಗಣತಿ ನಮೂನೆಗಳನ್ನು ತಲುಪಿಸಿದ್ದಾರೆ.

ಕೆಲ ಬಿಎಲ್ಓ ಗಳು ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು (ಇಎಫ್) ಇನಿಮ್ಯೂರೇಷನ್ ಫಾರ್ಮಗಳನ್ನು
ಡಿಜಿಟಲೈಜೇಶನ್ ಮಾಡಿ ಪ್ರಕ್ರೀಯೆಗೆ ವೇಗ ನೀಡಿದ್ದಾರೆ.
ಈ ಸಾಧನೆಗೆ ಭಾಜನರಾಗಿರುವ ಒಟ್ಟು ಹತ್ತು ಜನ (ಬಿಎಲ್ಓ) ಮತಗಟ್ಟೆ ಅಧಿಕಾರಿಗಳನ್ನು ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತರು ಹಾಗೂ ದಕ್ಷಿಣ ಕ್ಷೇತ್ರದ ಸ.ಚುನಾವಣಾಧಿಕಾರಿಗಳಾಗಿರುವ ಡಾ.ಸಿದ್ದು ಹುಲ್ಲೋಳಿ ಅವರು ಸನ್ಮಾನಿಸಿ ಗೌರವಿಸಿದರು.

ನಂತರ ಮಾತನಾಡಿದ ಅವರು, ಈಗಾಗಲೇ ಶೇ 20 ರಷ್ಟು ಡಿಜಿಟಲೈಸೇಶನ್ ಕಾರ್ಯ ಮುಗಿದಿದ್ದು, ಎಸ್ಐಆರ್ ಸಿಬ್ಬಂದಿ ವಿಶ್ರಮಿಸದೆ ಪ್ರಾಮಾಣಿಕವಾಗಿ ಅತ್ಯಂತ ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ, ಸಾರ್ವಜನಿಕರು ಸಹ ಸಹಕಾರ ನೀಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಎಎಲ್ಎಂಟಿ, ಬಿಎಲ್ಓಗಳು ಸೇರಿದಂತೆ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.