ಪತ್ರಕರ್ತರ ಅರೋಗ್ಯ ವಿಮೆಯ ಬಗ್ಗೆ ಶಾಸಕ ಅಭಯ ಪಾಟೀಲ ಪ್ರಸ್ತಾಪ..

ಪತ್ರಕರ್ತರ ಅರೋಗ್ಯ ವಿಮೆಯ ಬಗ್ಗೆ ಶಾಸಕ ಅಭಯ ಪಾಟೀಲ ಪ್ರಸ್ತಾಪ..

ವಾಸ್ತವ ವಿಷಯ ತಿಳಿಸಿದ ನಗರ ಸೇವಕ ರಮೇಶ ಸೊಂಟಕ್ಕಿ..

ಜನರ ತೆರಿಗೆ ಹಣದ ವೆಚ್ಚದಲ್ಲಿ ಜನಪ್ರತಿನಿಧಿಗಳಿಗೂ ಜವಾಬ್ದಾರಿ ಬೇಕು..

ಬೆಳಗಾವಿ : ಕಳೆದ ವರ್ಷ ಪತ್ರಕರ್ತರಿಗೆ ನೀಡುತ್ತಿದ್ದ ಅರೋಗ್ಯ ವಿಮೆಯನ್ನು ನಿಲ್ಲಿಸುವ ಮಾಹಿತಿ ಬಂದಿದ್ದು, ಅದಕ್ಕೆ ಆಡಿಟ್ ಅಬ್ಜೆಕ್ಷನ್ ಇದೆ ಎಂಬ ಕಾರಣ ಹೇಳುತ್ತಿದ್ದಿರಿ, ಹಿಂದೆ ಎಷ್ಟೋ ವಿಷಯಗಳಿಗೆ ಅಡಿಟ್ ಅಬ್ಜೆಕ್ಷನಗಳು ಬಂದಿವೆ, ಈಗ ಈ ವಿಷಯಕ್ಕೆ ಬಂದಿದ್ದರೂ ಮುಂದುವರೆದು ಯೋಜನೆಯನ್ನು ನೀಡಿ ಎಂದು ಬೆಳಗಾವಿಯ ದಕ್ಷಿಣದ ಶಾಸಕ ಅಭಯ ಪಾಟೀಲ್ ಹೇಳಿದ್ದಾರೆ.

ಸೋಮವಾರ ಪಾಲಿಕೆಯ ಪರಿಷತ ಸಭಾ ಭವನದಲ್ಲಿ ಜರುಗಿದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಶಾಸಕರು, ಇದಕ್ಕೇಕೆ ಅಡಿಟ್ ತಕರಾರು ಬಂದಿದೆ? ಮಹಾಪೌರರೇ, ಅಧಿಕಾರಿಗಳೇ ಉತ್ತರ ಹೇಳಿ, ಅವರು ಬೋಗಸ್ ಬಿಲ್ ಏನಾದರು ಮಾಡಿದ್ದಾರಾ? ಉತ್ತರ ನೀಡಿ ಎಂದಾಗ, ನಾಮ ನಿರ್ದೇಶಿತ ನಗರ ಸೇವಕ ರಮೇಶ ಸೊಂಟಕ್ಕಿ ಮಾತನಾಡಿ, ಹೌದು ಆ ಪಲಾನುಭವಿಗಳ ಪಟ್ಟಿಯಲ್ಲಿ ಬೋಗಸ ಸಂಗತಿ ನಡೆದಿದೆ ಎಂದಾಗ, ಶಾಸಕರ ಮುಖದಲ್ಲಿ ಗೊಂದಲ ಮೂಡಿದಂತಿತ್ತು, ಬೇರೆ ತಾಲೂಕಿನವರು ಇದ್ದಾರೆ ಜೊತೆಗೆ ಅನೇಕ ಬೋಗಸ ಪಲಾನುಭವಿಗಳು ಇದ್ದಾರೆ ಎಂದರು.

ಆಗ ಮತ್ತೆ ಮಾತನಾಡಿದ ಶಾಸಕ ಅಭಯ ಪಾಟೀಲ ಅವರು, ನಾವು ಕೂಡಾ ನಮ್ಮ ತಾಲೂಕಿನವರ ಬಗ್ಗೆನೇ ಹೇಳುತ್ತೇವೆ, ರಮೇಶ್ ಅವರು ಹೇಳಿದ ಹಾಗೆ ಈ ಬೋಗಸ್ ಪಲಾನುಭವಿಗಳನ್ನು ನೀವು ಏಕೆ ಪರಿಶೀಲನೆ ಮಾಡುತ್ತಿಲ್ಲ, ಯಾರು ಆ ಪಟ್ಟಿ ಕಳಿಸಿದ್ದು, ವಾರ್ತಾ ಇಲಾಖೆಯಿಂದ ಪಟ್ಟಿ ಬಂದಿತ್ತಾ? ಇವೇಕೆ ಪರಿಶೀಲನೆ ಮಾಡಲಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು. ಆದರೆ ಪಲಾನುಭವಿಗಳ ಪಟ್ಟಿಯ ಪೂರ್ಣಸತ್ಯವನ್ನು ಅರ್ಥ ಮಾಡಿಕೊಳ್ಳದೆ, ಹಿಂದಿನ ಪ್ರಕಾರದಂತೆ ಅವರಿಗೆ ಅನುಕೂಲ ಮಾಡಿ, ಮುಂದೆ ನೋಡೋಣ ಎಂದಿದ್ದಾರೆ.

2021ರಲ್ಲಿ ಆಗಿನ ಪಾಲಿಕೆಯ ಆಯುಕ್ತರಾದ (ಆಡಳಿತಧಿಕಾರಿ) ರುದ್ರೇಶ್ ಗಾಳಿ ಅವರು, ಪಾಲಿಕೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ನಗರ ವಲಯದ ಪತ್ರಕರ್ತರಿಗೆ ಆರೋಗ್ಯ ವಿಮೆ ಇರಲಿ ಎಂಬ ಒಳ್ಳೆಯ ಉದ್ದೇಶದಿಂದ 56 ಮಾನ್ಯತೆ ಪಡೆದ ಪತ್ರಕರ್ತರು ಹಾಗೂ ಅವರ 168 ಕುಟುಂಬ ಸದಸ್ಯರನ್ನು ಒಳಗೊಂಡಂತೆ ಆರೋಗ್ಯ ವಿಮೆಯನ್ನು ಜಾರಿಗೆ ತಂದಿದ್ದರು. ಆದರೆ ಇಂದು 128 ಪತ್ರಕರ್ತರು ಹಾಗೂ ಅವರ ಕುಟುಂಬದ ಸುಮಾರು 398 (ಒಟ್ಟು 526) ಜನರಿಗೆ ಆರೋಗ್ಯ ವಿಮೆ ನೀಡಲಾಗಿದೆ ಎಂಬ ಮಾಹಿತಿ ಇದೆ.

ಒಳ್ಳೆ ಉದ್ದೇಶದಿಂದ ಮಾಡಿರುವ ಈ ಯೋಜನೆ ಇಂದು ದಾರಿ ತಪ್ಪಿರುವ ಕೆಲ ನಿದರ್ಶನಗಳಿವೆ, ಇದರಿಂದ ಬೆಳಗಾವಿ ಜನತೆ ಕಷ್ಟ ಪಟ್ಟು ತೆರಿಗೆ ಕಟ್ಟಿದ ಪಾಲಿಕೆಯ ಅನುದಾನ ದುಂದುವೆಚ್ಚ ಆಗುತ್ತಿರುವ ಸಂಶಯ ಉಂಟಾಗಿದೆ, ಪಲಾನುಭವಿಗಳ ಪಟ್ಟಿಯಲ್ಲಿಯ ಕೆಲ ದೋಷಗಳೆಂದರೆ….

1) ಕೆಲ ಜನರು ಯಾವ ಪತ್ರಿಕೆ/ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆಂದು ತಿಳಿದಿಲ್ಲ, ಅವರ ಸಂಸ್ಥೆಗಳ ನೇಮಕ ಆದೇಶ ಪತ್ರವನ್ನೇ ಪಡೆದಿಲ್ಲ.

2) ಕೆಲ ಪಲಾನುಭವಿಗಳು ಖುದ್ದಾಗಿ ಬಂದು ಅರ್ಜಿ ಸಲ್ಲಿಸಿಲ್ಲ, ಯಾರೋ ಒಬ್ಬರು ಬಂದು, ಎಲ್ಲರ ಹೆಸರು ಕೊಟ್ಟಂತಿದೆ.

3) ಒಂದು ಪೇಪರ್ / ವಾಹಿನಿಗೆ ಎಷ್ಟು ಕಾರ್ಡ ಎಂದು ನಿಯಮವಿಟ್ಟಿಲ್ಲ.

4) ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ಸಿಬ್ಬಂದಿಗೂ ಆರೋಗ್ಯ ವಿಮೆ ನೀಡಿರುವದು.

5) ಪಾಲಿಕೆ ವ್ಯಾಪ್ತಿ ಬಿಟ್ಟು ಬೇರೆ ತಾಲ್ಲೂಕಿನ ಜನರಿಗೂ ಈ ಯೋಜನೆ ನೀಡಿದ್ದು..

6) ಪ್ರತಿನಿತ್ಯ ನಗರದ ಸುದ್ದಿ ಮಾಡುವ ಕೆಲ ಕ್ರಿಯಾಶೀಲ ಪತ್ರಕರ್ತರಿಗೆ ಈ ಯೋಜನೆ ನೀಡದೇ ಇರುವದು,

ಪ್ರಸ್ತುತ ಪಟ್ಟಿಯಲ್ಲಿ ಈ ದೋಷಗಳಿದ್ದರೆ, ಮತ್ತೆ ಇನ್ನೊಂದು 20 ಜನರ ಪಟ್ಟಿ ಸಿದ್ದವಾಗಿದೆ, ಅದರಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವವರೂ ಇದ್ದಾರೆ, ಪಾಲಿಕೆಯ ಸಾಮಾನ್ಯ ಅಂಶಗಳು ತಿಳಿಯದವರೂ ಇದ್ದಾರೆ, ಇದಾದ ನಂತರ ಮತ್ತೆ ಕೆಲ ಜನ ನಾವು ಇನ್ಸ್ಟಾಗ್ರಾಮ್, ಫೇಸ್ ಬುಕ್ ಲೈವ್ ಮಾಡುತ್ತೇವೆ ನಮಗೂ ಆರೋಗ್ಯ ವಿಮೆ ನೀಡಿ ಎಂದು ಬರುತ್ತಾರೆ, ಹೀಗೆ ಎಷ್ಟೊಂದು ಜನರಿಗೆ ವಿಮೆ ಕೊಡುತ್ತೀರಾ? ಜನರು ಕಟ್ಟಿದ ತೆರಿಗೆ ಹಣ ಎಂದರೆ ಹಂಚಿ ಪಿಲ್ಲಿಯೇ? ಪಾಲಿಕೆಯ ಅನುದಾನದ ಬಳಕೆಯಲ್ಲಿ ಒಂದು ಮಾನದಂಡ ಬೇಡವೇ? ರಾಜಕಾರಣಿಗಳಿಗೆ ಜನರು ಕಟ್ಟಿದ ತೆರಿಗೆ ಹಣದ ಬಗ್ಗೆ ಗೌರವವಿಲ್ಲವೇ? ತಿಳಿದವರಾಗಿಯೇ ತಪ್ಪು ಮಾಡಬಹುದೇ? ಶಾಸಕರು ಎಲ್ಲವನ್ನು ತಿಳಿದು ಅಧಿಕಾರಿಗಳಿಗೆ ಸೂಚನೆ ನೀಡಬಾರದೇ? ಎಂಬ ಹಲವು ಪ್ರಶ್ನೆಗಳು ನಗರವಾಸಿಗಳಲ್ಲಿ ಕಾಡುತ್ತಿವೆ.

ವರದಿ ಪ್ರಕಾಶ್ ಬಿ ಕೆ..