ಸೇವಾ ನಿವೃತ್ತ ಸೈನಿಕನಿಗೆ ಗೌರವೀಯ ಸತ್ಕಾರ..

ಸೇವಾ ನಿವೃತ್ತ ಸೈನಿಕನಿಗೆ ಗೌರವೀಯ ಸತ್ಕಾರ..

ಸಿಂದೊಳ್ಳಿ ಹಾಗೂ ನೀಲಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸತೀಶ ಅವರ ತಂಡದಿಂದ ಗೌರವ..

ಬೆಳಗಾವಿ : ತಾಲೂಕಿನ ಶಿಂದೊಳ್ಳಿ ಗ್ರಾಮದ ಯೋಧ ರಮೇಶ್ ಚಂದ್ರು ಮಂಗನ್ನವರ ಅವರು ಭಾರತೀಯ ಭೂ ಸೇನೆಯಲ್ಲಿ 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಇಂದು ಮರಳಿ ಸ್ವಗ್ರಾಮಕ್ಕೆ ಆಗಮಿಸಿದ್ದಾರೆ.

ಈ ಹಿನ್ನಲೆಯಲ್ಲಿ ಅವರಿಗೆ ಸಮಸ್ತ ಗ್ರಾಮಸ್ಥರ ಪರವಾಗಿ ನಿಲಜಿ ಹಾಗೂ ಶಿಂದೊಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸತೀಶ್ ಶಹಾಪುರಕರ ಅವರು ಗೌರವೀಯ ಸತ್ಕಾರವನ್ನು ನೆರವೇರಿಸಿದ್ದಾರೆ.

ಈ ಸಂಧರ್ಭದಲ್ಲಿ ಸ್ಥಳೀಯ ಪ್ರಮುಖರಾದ ಬಾಬಾಗೌಡ ಪಾಟೀಲ್, ಬಾಳು ಅನಗೋಳಕರ, ಸುರೇಶ್ ಮುಚಂಡಿ, ಮಾರುತಿ ಮಂಗನವರ, ನಾಗೇಂದ್ರ ಕುರಬರ ಹಾಗೂ ಇತರರು ಉಪಸ್ಥಿತರಿದರು.