ಪಾಲಿಕೆಯಲ್ಲಿ ರಾಜೀವ್ ಗಾಂಧಿ ಆವಾಸ್ ಯೋಜನೆಯ ಪ್ರಗತಿ ಪರಿಶೀಲನೆ.

ಪಾಲಿಕೆಯಲ್ಲಿ ರಾಜೀವ್ ಗಾಂಧಿ ಆವಾಸ್ ಯೋಜನೆಯ ಪ್ರಗತಿ ಪರಿಶೀಲನೆ.

ಪ್ರಗತಿ ಕೇವಲ ಸಭೆಗೆ ಸೀಮಿತವಾಗದೆ ವಸತಿರಹಿತರಿಗೆ ತಲುಪಬೇಕು..

ಬೆಳಗಾವಿ : ರಾಜೀವ ಗಾಂಧಿ ಆವಾಸ ಯೋಜನೆಯ ಕುರಿತು ಗುರುವಾರ ಮಹಾನಗರ ಪಾಲಿಕೆಯಲ್ಲಿ
ಪ್ರಗತಿ ಪರಿಶೀಲನಾ ಸಭೆ ಜರುಗಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು,
ಅಧಿಕಾರಿಗಳೊಂದಿಗೆ ಚರ್ಚಿಸಿ ಇಲ್ಲಿಯ ವರೆಗೆ ಯೋಜನೆ ಕುರಿತು ಆಗಿರುವ ಪ್ರಗತಿಯ ಬಗ್ಗೆ ಮಾಹಿತಿ ಪಡೆದು ಸಲಹೆ ಸೂಚನೆಗಳನ್ನು ನೀಡಿದರು.

ಯೋಜನೆಯಲ್ಲಿ ಎಷ್ಟು ಪ್ರಗತಿ ಆದರೆ ಏನು ಬಂತು? ನಗರದ ಬಡ ವಸತಿರಹಿತರಿಗೆ ವಸತಿ ನೀಡುವದು ಈ ಯೋಜನೆಯ ಮುಖ್ಯ ದ್ಯೇಯ, ಆದರೆ ಇಂದಿಗೂ ಕೂಡಾ ನಗರದಲ್ಲಿ ಹಲವಾರು ವರ್ಷಗಳಿಂದ ಬಾಡಿಗೆ ಮನೆಯಲ್ಲಿಯೇ ಬದುಕುತ್ತಿರುವ ಅನೇಕ ಕಡು ಬಡವರಿಗೆ ಈ ಸೌಲಭ್ಯ ದೊರೆತಿಲ್ಲ, ಅವರಿಗೆ ಇಂತಹ ಯೋಜನೆ ಇದೆ ಎಂಬುದರ ಬಗ್ಗೆನೇ ಅರಿವಿಲ್ಲವೇನೋ, ಜನರಲ್ಲಿ ಯೋಜನೆಯ ಕುರಿತು ಜಾಗೃತಿ ಮೂಡಿಸಬೇಕಾಗಿದ್ದು ಅಧಿಕಾರಿಗಳ ಕರ್ತವ್ಯ.

ಹಿಂದೆ ಈ ಯೋಜನೆಯಲ್ಲಿ ಆಯ್ಕೆಯಾಗಿರುವ ಪಲಾನುಭವಿಗಳ ಮಾಹಿತಿಗಳನ್ನು ಕೇಳಿದಾಗ, ಈ ವಿಭಾಗದ ಸಿಬ್ಬಂದಿಗಳು ನೀಡುವ ಉತ್ತರವೇ ಬೇರೆ, ಪಟ್ಟಿ ಹಾಗೂ ಮಾಹಿತಿ ಅಧ್ಯಕ್ಷರ ಬಳಿ ಇದೆ ಎಂದು ಹಾರಿಕೆಯ ಉತ್ತರ ನೀಡುವದು ರೂಢಿಯಾಗಿದೆ. ಇನ್ನಾದರೂ ಪಾರದರ್ಶಕವಾಗಿ ಸ್ಥಳೀಯ ಬಡ ವಸತಿರಹಿತರಿಗೆ ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಕೆಲಸ ಮಾಡಬೇಕು, ಆಗ ಇಂತಹ ಸಭೆಗಳು ನಿಜವಾಗಲೂ ಪ್ರಗತಿಯತ್ತ ಸಾಗುತ್ತವೆ..

ಪಾಲಿಕೆ ಆಯುಕ್ತ ಕಾರ್ತಿಕ್ ಎಂ., ಅಭಿವೃದ್ಧಿ ಶಾಖೆ ಉಪ ಆಯುಕ್ತೆ, ಲಕ್ಷ್ಮೀ ಸುಳಗೇಕರ್, ಕಂದಾಯ ಶಾಖೆ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ, ಆಡಳಿತ ಶಾಖೆ ಉಪ ಆಯುಕ್ತ ಉದಯ ಕುಮಾರ ಟಿ.ಬಿ., ಮುಖ್ಯ ಲೆಕ್ಕಾಧಿಕಾರಿ ಮಂಜುನಾಥ ಬೀಳಗಿಕರ್ ಇತರೆ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *