ಬೆಳಗಾವಿ ಉತ್ತರ ಮತಕ್ಷೇತ್ರದ ಅನಧಿಕೃತ ಮತದಾರರನ್ನು ತಗೆದು ಹಾಕಿ..

ಬೆಳಗಾವಿ ಉತ್ತರ ಮತಕ್ಷೇತ್ರದ ಅನಧಿಕೃತ ಮತದಾರರನ್ನು ತಗೆದು ಹಾಕಿ..

ಮಾಜಿ ಶಾಸಕ ಅನಿಲ ಬೆನಕೆ ಅವರಿಂದ ಜಿಲ್ಲಾ ಚುನಾವಣಾಧಿಕಾರಿಗೆ ಮನವಿ..

ಬೆಳಗಾವಿ : ಭಾರತೀಯ ಜನತಾ ಪಕ್ಷ ಬೆಳಗಾವಿ ಮಹಾನಗರ ಹಾಗೂ ಉತ್ತರ ಮಂಡಳ ವತಿಯಿಂದ ಇಂದು ಜಿಲ್ಲಾಧಿಕಾರಿ/ಜಿಲ್ಲಾ ಚುನಾವಣಾಧಿಕಾರಿಗಳಿಗೆ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿನ ಮತದಾರರ ಪಟ್ಟಿಯಲ್ಲಿ ಅನಧಿಕೃತವಾಗಿ ದಾಖಲಾದ ಮತದಾರರ ಹೆಸರು ತೆಗೆದು ಹಾಕುವ ಕುರಿತು ಭಾರತೀಯ ಜನತಾ ಪಕ್ಷದ ಬಿಎಲ್ಎ 1 ಆದ ಅನಿಲ್ ಬೆನಕೆ ಅವರ ನೇತೃತ್ವದಲ್ಲಿ ವಿನಂತಿ ಅರ್ಜಿ ನೀಡಲಾಯಿತು.

ಬೆಳಗಾವಿ ನಗರದ ಉತ್ತರ ಮತಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಶೀಲಿಸಿದಾಗ ಬೂತ ಸಂಖ್ಯೆ 212, 213, 214. 215 ರಲ್ಲಿ ಒಟ್ಟು 263 ಮತಗಳು ಒಂದೆ ಸಿ.ಟಿ.ಎಸ್ ನಂಬರ 2438/1 ರಿಂದ /127 ಮನೆಯ ಹೆಸರಿನಲ್ಲಿ. ಮೇಲೆ ನಮುದಿಸಿದ 4 ಬೂತಗಳಲ್ಲಿ ನೋಂದಣಿ ಇದ್ದು ಮತ್ತು ಸಿ.ಟಿ.ಎಸ್. ನಂಬರ 2438 ಹೆಸರಿನ ಮೇಲೆ ಬೂತ ಸಂಖ್ಯೆ 212 ರಲ್ಲಿ 205 ವೋಟ, 213 ರಲ್ಲಿ 20 ವೋಟ, 214 ರಲ್ಲಿ 34 ವೋಟ ಮತ್ತು 215 ರಲ್ಲಿ 4 ವೋಟ ರಂತೆ ಒಂದೇ ನಂಬರ ಮೇಲೆ ಬೇರೆ ಬೇರೆ ಬೂತನಲ್ಲಿ ಹೆಸರುಗಳು ಹೊಂದಿದ್ದಲ್ಲದೆ, ಉತ್ತರ ಮತಕ್ಷೇತ್ರದಲ್ಲಿ ಹೀಗೆ ಎಸ್.ಐ.ಆರ್. ಪ್ರಕ್ರಿಯೆ ನಡೆದ ನಂತರ ಸುಮಾರು 8 ಸಾವಿರ ಮತಗಳು ಸ್ಥಳಾಂತರ, ಮರು ಮುದ್ರಣ, ಮರಣ ಹಾಗೂ ದಾಖಲಾತಿ ಸಲ್ಲಿಸದೇ ಇರುವ ಮತಗಳು ಕಂಡು ಬಂದಿದ್ದು ಇವುಗಳನ್ನು ಪರಿಶೀಲಣೆ ಮಾಡಿ ಇದರಲ್ಲಿ ಇರುವ ಅನಧಿಕೃತ ಮತಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬೇಕೆಂದು ಭಾರತೀಯ ಜನತಾ ಪಕ್ಷದ ಎಲ್ಲ ಪದಾಧಿಕಾರಿಗಳಿಂದ ವಿನಂತಿ ಮಾಡಲಾಯಿತು.

ಈ ಸಂಧರ್ಭದಲ್ಲಿ ಮಹಾನಗರ ಜಿಲ್ಲಾಧ್ಯಕ್ಷರಾದ ಗೀತಾ ಸುತಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಜಶೇಖರ ದೋಣಿ, ಬಿಜೆಪಿ ಬೆಳಗಾವಿ ಉತ್ತರದ ವಿಜಯ ಕೂಡಗಾನೂರ, ಪ್ರಧಾನ ಕಾರ್ಯದರ್ಶಿ ವಿನೋದ್ ಲಂಗೋಟಿ, ಪ್ರಮುಖರಾದ ಎಂ ಬಿ ಜಿರಲಿ, ಉಜ್ವಲ್ ಬಡವನಾಚೆ, ರಾಜೇಂದ್ರ ಹರ್ಕುಣಿ, ಮಹಾಂತೇಶ ವಕ್ಕುಂದ, ಮುರುಗೇಂದ್ರಗೌಡ ಪಾಟೀಲ, ಡಾ. ರವಿ ಪಾಟೀಲ, ನಾಗರಾಜ ಪಾಟೀಲ ಹಾಗೂ ನಗರ ಸೇವಕರು ಕಾರ್ಯಕರ್ತರ ನೇತೃತ್ವದಲ್ಲಿ ವಿನಂತಿ ಮಾಡಲಾಯಿತು.

Leave a Reply

Your email address will not be published. Required fields are marked *