ಪಾಲಿಕೆಯ ಮೇಯರ್ ಹಾಗೂ ಡೆಪ್ಯೂಟಿ ಮೇಯರ್ ಆಯ್ಕೆಯ ಅಂತಿಮ ಕಸರತ್ತು…

ಪಾಲಿಕೆಯ ಮೇಯರ್ ಹಾಗೂ ಡೆಪ್ಯೂಟಿ ಮೇಯರ್ ಆಯ್ಕೆಯ ಅಂತಿಮ ಕಸರತ್ತು…

ಪ್ರೀತಿ ಕಾಮಕರ ಹಾಗೂ ಸಂತೋಷ್ ಪೆಡ್ನಕರಗೆ ಅವಕಾಶದ ಸಾಧ್ಯತೆ..

ಬೆಳಗಾವಿ : ರಾಜ್ಯದಲ್ಲಿ (GBA) (ಗ್ರೇಟರ್ ಬೆಂಗಳೂರು ಅತೋರಿಟಿ) ಬ್ರಹತ್ ಬೆಂಗಳೂರು ಪ್ರಧಿಕಾರ ಬಿಟ್ಟರೆ ಅತೀ ಪ್ರಭಾವಿ ಹಾಗೂ ಶಕ್ತಿಶಾಲಿ ಸ್ಥಳೀಯ ಸಂಸ್ಥೆ ಎಂದರೆ ಅದು ನಮ್ಮ ಬೆಳಗಾವಿ ಮಹಾನಗರ ಪಾಲಿಕೆ ಎನ್ನಬಹುದು, ಇಂತಹ ಪಾಲಿಕೆಯ ಮಹಾಪೌರ ಹಾಗೂ ಉಪ ಮಹಾಪೌರ ಸ್ಥಾನದ ಆಯ್ಕೆಯ ಕಸರತ್ತು ಕೆಲ ದಿನಗಳಿಂದ ನಡೆದಿದ್ದು ಈಗ ಅಂತಿಮ ಹಂತಕ್ಕೆ ತಲುಪಿದಂತೆ ಕಾಣುತ್ತಿದೆ.

ಬೆಳಗಾವಿ ಪಾಲಿಕೆಯಲ್ಲಿ ಬಹುಮತ ಪಡೆದಿರುವ ಬಿಜೆಪಿ ಪಕ್ಷ ಆಡಳಿತ ಹಿಡಿದಿದ್ದು, ಮೇಯರ್ ಹಾಗೂ ಉಪ ಮೇಯರ್ ಸ್ಥಾನವನ್ನು ಬಿಜೆಪಿ ಪಕ್ಷದಿಂದ ಆಯ್ಕೆಯಾದ ನಗರ ಸೇವಕರಿಗೆ ನೀಡುತ್ತಿದ್ದು, ಈಗಾಗಲೇ ಈ ಕುರಿತಾಗಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಪ್ರಭಾವಿ ಶಾಸಕರಾದ ಅಭಯ ಪಾಟೀಲ ಅವರ ನೇತ್ರತ್ವದಲ್ಲಿ ಕೆಲ ಮಹತ್ವದ ಸಭೆಗಳು ಆಗಿವೆ ಎಂಬ ಮಾಹಿತಿಯಿದೆ.

ಈ ಸಲ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಡೆಪ್ಯೂಟಿ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿದ್ದು, ಅನೇಕರು ಆಕಾಂಕ್ಷಿಗಳಾಗಿದ್ದರು. ಆದರೆ ಕೆಲ ನಗರ ಸೇವಕರ ಮಾಹಿತಿಯ ಪ್ರಕಾರ ಮಹಾಪೌರ ಸ್ಥಾನ ವಾರ್ಡ ಸಂಖ್ಯೆ 21ರ ಪ್ರೀತಿ ಕಾಮಕರ ಅಥವಾ ವಾರ್ಡ್ ಸಂಖ್ಯೆ 49ರ ದೀಪಾಲಿ ಟೋಪಗಿಗೆ ಲಭಿಸುವ ಸಾಧ್ಯತೆ ಕಂಡುಬಂದಿದೆ.

ಇನ್ನು ಉಪ ಮಹಾಪೌರ ಸ್ಥಾನಕ್ಕೆ ವಾರ್ಡ್ ಸಂಖ್ಯೆ 6ರ ನಗರ ಸೇವಕರಾದ ಸಂತೋಷ್ ಪೇಡನೇಕರ ಅವರಿಗೆ ಸಾಧ್ಯತೆ ದಟ್ಟವಾಗಿದ್ದು, ವಾರ್ಡ್ ಸಂಖ್ಯೆ 29ರ ನಗರ ಸೇವಕ ನೀತಿನ ಜಾಧವ ಹೆಸರು ಕೂಡಾ ಕಣದಲ್ಲಿದೆ ಎಂಬ ಮಾಹಿತಿಯಿದೆ.

ಸಾಧ್ಯತೆಗಳು ಏನೇ ಇದ್ದರೂ, ನಾಳಿನ ಚುನಾವಣಾ ಫಲಿತಾಂಶ ಬರುವ ವರೆಗೆ ಕಾಯ್ದು ನೋಡಿದರೆ ನಿಖರ ಫಲಿತಾಂಶ ಲಭಿಸುವದು, ಒಟ್ಟಿನಲ್ಲಿ ದಕ್ಷಿಣದ ಶಾಸಕರ ನೇತೃತ್ವದಲ್ಲಿ ಬಿಜೆಪಿ ಪಕ್ಷ ಪಾಲಿಕೆಯಲ್ಲಿ ಈ ಹಿಂದೆ ಮಾಡಿಕೊಂಡು ಬಂದಂತೆ ಉತ್ತಮ ಹಾಗೂ ಅಭಿವೃದ್ಧಿಪರ ಆಡಳಿತ ನಡೆಸುವಂತಹ ನಾಯಕರನ್ನು ಆಯ್ಕೆ ಮಾಡುತ್ತದೆ ಎಂಬುದು ಸಾರ್ವಜನಿಕರ ನಂಬಿಕೆ..

ವರದಿ ಪ್ರಕಾಶ್ ಬಿ ಕೆ..