ಬೆಳಗಾವಿ ಪಾಲಿಕೆಗೆ ಪ್ರೀತಿ ಕಾಮಕರ ಮೇಯರ್ ಹಾಗೂ ಹನುಮಂತ ಕೊಂಗಾಲಿ ಉಪ ಮೇಯರ್..
ಸರ್ವ ಸಮಾಜದ ವಿಶ್ವಾಸ ಪಡೆಯುವ ಆಯ್ಕೆ..
ಶಾಸಕ ಅಭಯ ಪಾಟೀಲ..
ಬೆಳಗಾವಿ : ಮಹಾನಗರ ಪಾಲಿಕೆ ಬೆಳಗಾವಿಯ ಮಹಾಪೌರ ಹಾಗೂ ಉಪ ಮಹಾಪೌರ ಆಯ್ಕೆಯು ಪಕ್ಷದ ಪಧಾಧಿಕಾರಿಗಳ ಸಹಮತದೊಂದಿಗೆ ಸಮಾಜದ ಸರ್ವ ವರ್ಗಗಳ ವಿಶ್ವಾಸವನ್ನು ಗಳಿಸುವ ನಿಟ್ಟಿನಲ್ಲಿ ಮಾಡಲಾಗಿದ್ದು, ಇದಕ್ಕೆ ಪಕ್ಷದ ಎಲ್ಲಾ ನಗರ ಸೇವಕರ ಒಪ್ಪಿಗೆಯೂ ಇದೆ ಎಂದು ಶಾಸಕ ಅಭಯ ಪಾಟೀಲ್ ಹೇಳಿದ್ದಾರೆ..
ಬುಧವಾರ ಪಾಲಿಕೆಯಲ್ಲಿ ತುರ್ತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿಯ ಬೆಳಗಾವಿ ನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ ಅವರು ಪಾಲಿಕೆಯ ಮಹಾಪೌರ ಹಾಗೂ ಉಪ ಮಹಾಪೌರರ ಹೆಸರುಗಳನ್ನು ಘೋಷಿಸಿದರು, ಮಹಾಪೌರರಾಗಿ ವಾರ್ಡ್ ಸಂಖ್ಯೆ 21ರ ನಗರ ಸೇವಕಿ ಪ್ರೀತಿ ಕಾಮಕರ ಹಾಗೂ ಉಪ ಮಹಾಪೌರರಾಗಿ ವಾರ್ಡ ಸಂಖ್ಯೆ 46ರ ಹನಮಂತ ಕೊಂಗಾಲಿ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
ಉಪ ಮೇಯರ್ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಆಗಿದ್ದ ವಾರ್ಡ್ ಸಂಖ್ಯೆ 06ರ ನಗರ ಸೇವಕ ಸಂತೋಷ್ ಪೇಡನೇಕರ ಅವರನ್ನು ಪಾಲಿಕೆಯ ಆಡಳಿತ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇನ್ನೇನು ಚುನಾವಣೆ ಪ್ರಕ್ರಿಯೆ ನಡೆದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದ್ದು, ಪಾಲಿಕೆಯಲ್ಲಿ ಬಹುಮತ ಹೊಂದಿರುವ ಬಿಜೆಪಿ ಪಕ್ಷದ ಪ್ರಮುಖರು ಸುದ್ದಿಗೊಷ್ಟಿಯಲ್ಲಿ ಹೇಳಿದಂತೆಯೇ ಮೇಯರ್ ಹಾಗೂ ಉಪ ಮೇಯರ ಆಯ್ಕೆ ಘೋಷಣೆ ಆಗುವ ನಿರೀಕ್ಷೆ ದಟ್ಟವಾಗಿವೆ..
ವರದಿ ಪ್ರಕಾಶ್ ಬಿ ಕೆ..