ಬೆಳಗಾವಿಯಲ್ಲಿ ಬಿಜೆಪಿಯಿಂದ ವಿಶೇಷ ಪೂಜೆ..
ಬೆಳಗಾವಿ : ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಅವರ ದಾಖಲೆಯ 4399 ದಿನಗಳ ಆಡಳಿತ, ದೀರ್ಘಾವಧಿ ಚುನಾಯಿತ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸುತ್ತಿರುವ ದಿನವಾದ ಇಂದು ನರೇಂದ್ರ ಮೋದಿಯವರ ಆಯುಷ್ಯವೃದ್ಧಿ ಮತ್ತು ಉತ್ತಮ ಆರೋಗ್ಯಕ್ಕಾಗಿ ಮುಂದಿನ ದಿನಗಳಲ್ಲಿ ಅವರಿಗೆ ಮತ್ತಷ್ಟು ಯಶಸ್ಸನ್ನು ಗಳಿಸಲೆಂದು ಬಿಜೆಪಿಯಿಂದ ಬೆಳಗಾವಿ ನಗರದ ಕೆ.ಎಲ್.ಇ ಸಂಸ್ಥೆಯ ಆವರಣದಲ್ಲಿರುವ ಶ್ರೀ ಶಿವಾಲಯ ದೇವಸ್ಥಾನದಲ್ಲಿ ವಿಶೇಷ ಪೂಜೆಯೊಂದಿಗೆ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿಯ ಜಿಲ್ಲಾಧ್ಯಕ್ಷರಾದ ಸುಭಾಷ್ ಪಾಟೀಲ, ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕರಾದ ಮಹಾಂತೇಶ ಕವಟಗಿಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧನಶ್ರೀ ದೇಸಾಯಿ, ಮಲ್ಲಿಕಾರ್ಜುನ ಮಾದಮ್ಮನವರ, ಜಿಲ್ಲಾ ಕೋಶಾಧ್ಯಕ್ಷ ಸಂತೋಷ ದೇಶನೂರ, ಉಪಾಧ್ಯಕ್ಷ ವಿನಯ ಕದಂ, ಧನಂಜಯ ಜಾಧವ, ಕಾರ್ಯದರ್ಶಿ ಮಂಜುನಾಥ ಪಮ್ಮಾರ, ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಯಲ್ಲೇಶ ಕೊಲಕಾರ, ಸೋನಾಲಿ ಸರ್ನೋಬತ್, ಮನೋಜ ಪಾಟೀಲ, ನಾಗರಾಜ ಗಸ್ತಿ, ಪ್ರವೀಣ ಮಾಳೇದರ, ಮಂಜು ಅಷ್ಟಗಿ, ಭಾರತಿ ತೋಟಗಿ ಹಾಗೂ ಇತರರು ಉಪಸ್ಥಿತರಿದ್ದರು..