ಬೆಳಗಾವಿಯಲ್ಲಿ ಕರ್ನಾಟಕ ಅಬಕಾರಿ ಇ-ಹರಾಜು 2026.
ಸಂಭಾವ್ಯ ಬಿಡದಾರರಿಗೆ ಯಶಸ್ವಿ ತರಬೇತಿ ಕಾರ್ಯಕ್ರಮ..
ಬೆಳಗಾವಿ : ಸರ್ಕಾರದ ಅಧಿಸೂಚನೆಯಂತೆ 2025 – 2026ರ ಐದು ವರ್ಷಗಳ ಅಬಕಾರಿ ಸನ್ನದುಗಳ ಇ-ಹರಾಜು ಪ್ರಕ್ರಿಯೆಯ ಕುರಿತು, ಸಂಭಾವ್ಯ ಬಿಡ್ ದಾರರಿಗೆ ಬೆಳಗಾವಿಯ ಅಬಕಾರಿ ವಿಭಾಗದಿಂದ ತರಬೇತಿ ಹಮ್ಮಿಕೊಂಡಿದ್ದು, ಸಂಭಾವ್ಯ ಬಿಡ್ ದಾರರಿಗೆ ಹರಾಜು ಪ್ರಕ್ರಿಯೆಯ ವಿವಿಧ ಹಂತಗಳು ಹಾಗೂ ನಿಯಮಗಳ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ಈ ತರಬೇತಿ ಕಾರ್ಯಕ್ರಮದಲ್ಲಿ ನೀಡಲಾಗಿದೆ.

ಗುರುವಾರ ನಗರದ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಬೆಳಗಾವಿ ಜಿಲ್ಲಾ (ಉತ್ತರ ಮತ್ತು ದಕ್ಷಿಣ) ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ಜರುಗಿದ ಈ ತರಬೇತಿ ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು, ಹರಾಜು ಪ್ರಕ್ರಿಯೆಯ ನಿರ್ವಹಣಾ ಸಂಸ್ಥೆಯ ಪ್ರಮುಖರು ಹಾಗೂ ನೂರಾರು ಸಂಭಾವ್ಯ ಬಿಡ್ ದಾರರು ಭಾಗಿಯಾಗಿದ್ದ ಈ ಕಾರ್ಯಕ್ರಮವು ಅಬಕಾರಿ ಸನ್ನದುಗಳನ್ನು ಹರಾಜಿನ ಮೂಲಕ ಪಡೆಯುವ ಸರಳ ವಿಧಾನಗಳನ್ನು ತಿಳಿಯಪಡಿಸಿದೆ.

ಮೊದಲಿಗೆ ಹರಾಜು ಪ್ರಕ್ರಿಯೆಯ ಸಾಮಾನ್ಯ ನಿಯಮಗಳ ಬಗ್ಗೆ ಅಬಕಾರಿ ಅಧಿಕಾರಿಯಾದ ವಿಜಯ ಹಿರೇಮಠ ಅವರು ಸಭೆಗೆ ಮಾಹಿತಿ ನೀಡಿದ್ದು, ಸರ್ಕಾರಕ್ಕೆ ಬರುವ ಆದಾಯವನ್ನು ಪಾರದರ್ಶಕವಾಗಿ ಮಾಡುವ ಉದ್ದೇಶದಿಂದ ಈಗ ಸಿಎಲ್ 2 ಮತ್ತು ಸಿಎಲ್ 9ಗೆ ಮಾತ್ರ ಹರಾಜು ನಡೆಯುತ್ತಿದೆ. ಅದರಲ್ಲಿ 2a 9a ಎಂದು ಮಾಡಲಾಗಿದ್ದು, ಇದು ಐದು ವರ್ಷಗಳ ಅವಧಿಯ ಹರಾಜು ಇರುತ್ತದೆ, ಇದರಲ್ಲಿ ಯಾರು ಅತೀ ಹೆಚ್ಚು ಬಿಡ್ ಮಾಡಿ, ತಗೆದುಕೊಳ್ಳುತ್ತಾರೋ (ಎಚ್1) ಅವರು ಈ ಹರಾಜು ಗೆಲ್ಲುತ್ತಾರೆ.
ಹರಾಜಿನಲ್ಲಿ ಭಾಗಿಯಾಗಲು ಅರ್ಹತೆಗೆ ಐದು ನಿಯಮಗಳಿದ್ದು, ಅದರ ಪರೀಕ್ಷೆ ನಂತರ ಆರ್ಥಿಕ ಸ್ಥಿತಿ ನೋಡುತ್ತಾರೆ, ನಂತರ ನೋಂದಣಿ, ಅದಾದ ನಂತರ ನೇರ ಹರಾಜು ಶುರು ಆಗುತ್ತದೆ, ಅದರಲ್ಲಿ ಬೆಳಗಾವಿ ಉತ್ತರ ಹಾಗೂ ದಕ್ಷಿಣ ಎಂದು ಹರಾಜು ಆಗುತ್ತದೆ, ನಂತರ ಹರಾಜು ನಂತರದ ಪ್ರಕ್ರಿಯೆ ನಡೆಯುತ್ತದೆ ನೀವು ಹೆಚ್ಚು ಬಿಡ್ ಮಾಡಿ, ವಿನ್ ಆದರೆ ಪ್ರಕ್ರಿಯೆ ಒಂದು ಹಂತಕ್ಕೆ ಮುಗಿದಂತಾಗುವದು ಎಂಬ ಮಾಹಿತಿ ನೀಡಿದರು..

ನೀವು ಈ ಬಿಡ್ ವೈಯಕ್ತಿಕ ಮಾಡಬಹುದು ಅಥವಾ ಗುಂಪಾಗಿಯೂ ಕೂಡಾ ಮಾಡಬಹುದು, ನೀವು ಸ್ಪರ್ಧೆ ಮಾಡುವ ಫರ್ಮ್ ನೋಂದಣಿ ಆಗಿರಲೇಬೇಕು, ನೋಟರಿ, ಬಾಂಡ್ ಮೇಲೆ ನಡೆಯುವದಿಲ್ಲ, ಒಂದು ವೇಳೆ ಬಿಡನಲ್ಲಿ ಗೆದ್ದರೆ, ಗೆಲುವು ಸಂಸ್ಥೆಯ ಹೆಸರಿನ ಮೇಲೆಯೇ ಬರುತ್ತದೆ. ಒಂದು ಹಂತದಲ್ಲಿ ದುಡ್ಡು ಕಟ್ಟಿದ ಮೇಲೆ ನನಗೆ ಬೇಡ ನನ್ನ ದುಡ್ಡು ವಾಪಸ ಕೊಡಿ ಎಂದರೆ ಅದು ಆಗುವದಿಲ್ಲ, ಆ ರೀತಿಯ ವ್ಯವಸ್ಥೆ ಇಲ್ಲಾ ದುಡ್ಡು ವಾಪಾಸ್ ಬರುವದಿಲ್ಲ ಎಂದರು.
ಸರ್ಕಾರಿ ಸೇವೆಯಲ್ಲಿರುವವರು, 21 ವರ್ಷದ ಕೆಳಗಿನವರು, ಅಪರಾಧ ಪ್ರಕರಣದಲ್ಲಿ ಹೆಸರು ಇದ್ದವರು ಅರ್ಹರಲ್ಲ, ಒಂದು ವೇಳೆ ಇವರು ಬಿಡ್ ಗೆದ್ದಿದ್ದರೂ, ಗೊತ್ತಾದ ನಂತರ ಅವರ ಬಿಡ್ ರದ್ದು ಮಾಡಿ, ಅವರು ಕಟ್ಟಿದ ಹಣವನ್ನು ಮುಟ್ಟುಗೊಲು ಹಾಕುತ್ತೇವೆ ಎಂದರು. ಎಲ್ಲಾ ಸನ್ನದುಗಳಲ್ಲಿ 18% ಎಸ್ಸಿ ಎಸ್ಟಿಗೆ ಮೀಸಲಾತಿ ಇದ್ದು, ಉಳಿದ 82 ಸಾಮಾನ್ಯ ವರ್ಗಕ್ಕಿದೆ, ಎಸ್ಸಿ ಎಸ್ಟಿಗಳು ಸಾಮಾನ್ಯ ವರ್ಗದಲ್ಲಿಯೂ ಬಿಡ್ ಮಾಡಬಹುದು, ಎಸ್ಸಿ ಎಸ್ಟಿಗಳಿಗೆ ಯಾವುದೇ ರೀತಿಯ ಶುಲ್ಕ ವಿನಾಯತಿಗಳಿಲ್ಲ ಎಂಬ ಮಾಹಿತಿ ನೀಡಿದ್ದಾರೆ.

ಬೆಳಗಾವಿ ಉತ್ತರದಲ್ಲಿ ಸಿಎಲ್ 2 ಮಾತ್ರ ಇದ್ದು, ಎಲ್ಲಾ ತಾಲೂಕು ಸೇರಿ ಒಟ್ಟು 10 ಲೈಸನ್ಸ್ ಗಳಿದ್ದು ಅದರಲ್ಲಿ 8 ಸಾಮಾನ್ಯ ವರ್ಗಕ್ಕೆ 2 ಎಸ್ಸಿ ಎಸ್ಟಿಗೆ ಮೀಸಲಿವೆ, ಇನ್ನು ದಕ್ಷಿಣಕ್ಕೆ ಬಂದರೆ ಒಟ್ಟು 11ಲೈಸನ್ಸ್ ಹರಾಜಿಗಿವೆ, ಬೆಳಗಾವಿಗೆ ಸಂಬಂಧಿಸಿದಂತೆ ಜುಲೈ 28 ಹಾಗೂ 29 ರಂದು ಮುಂಜಾನೆ ಮತ್ತು ಮಧ್ಯಾಹ್ನ ಎರಡು ಸಮಯ ಬಿಡ್ ನಡೆಯುವ ಸಾಧ್ಯತೆ ಇದೆ ಎಂಬ ಮಾಹಿತಿ ನೀಡಿದ ಅವರು ಸಭೆಯಲ್ಲಿ ಸಂಭಾವ್ಯ ಬಿಡ್ ದಾರರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ, ಕೊನೆಗೆ ಹರಾಜು ಪ್ರಕ್ರಿಯೆಯ ಎಲ್ಲಾ ಹಂತಗಳು ನಮಗೆ ಸಂಪೂರ್ಣವಾಗಿ ತಿಳಿದಿವೆ ಎಂದು ಭಾಗಿಯಾದ ಸಂಭಾವ್ಯ ಬಿಡ್ ದಾರರು ಹೇಳಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾಗಿತ್ತು..
ವರದಿ ಪ್ರಕಾಶ ಬಿ ಕೆ.