ನಕಲಿ ಔಷಧ ಜಾಲದ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ..

ನಕಲಿ ಔಷಧ ಜಾಲದ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ..

ವಿವಾ ಫಾರ್ಮಾ ಕಚೇರಿ ಎದುರು ಕರವೇ ಪ್ರತಿಭಟನೆ..

ಬೆಳಗಾವಿ : ರಾಜ್ಯದಲ್ಲಿ ನಕಲಿ ಔಷಧಿಗಳ ಮಾರಾಟಕ್ಕೆ ಸಂಬಂಧಿಸಿದಂತೆ ಜಾಲವೊಂದು ಪತ್ತೆಯಾಗಿದ್ದು, ಈ ಪ್ರಕರಣದಲ್ಲಿ ಬೆಳಗಾವಿಯ ಕ್ಲಬ್ ರಸ್ತೆಯಲ್ಲಿರುವ ವಿವಾ ಫಾರ್ಮಾ ಸಂಸ್ಥೆಯೂ ಸೇರಿದೆ ಎಂದು ಆರೋಪಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ವತಿಯಿಂದ ಪ್ರತಿಭಟನೆ ಹಮ್ಮಿಕೊಂಡಿತ್ತು.

ಔಷಧಿಗಳ ಪ್ಯಾಕೇಟ್‌ಗಳಿಗೆ ನಕಲಿ ಲೇಬಲ್‌ಗಳನ್ನು ಅಂಟಿಸಿ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಕರವೇ, ಈ ಪ್ರಕರಣದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ವಿವಾ ಫಾರ್ಮಾ ಮಾಲೀಕರನ್ನು ಬಂಧಿಸಿ, ಅವರು ರಾಜ್ಯದ ವಿವಿಧೆಡೆ ನಡೆಸುತ್ತಿರುವ ಔಷಧ ವ್ಯಾಪಾರದ ಕುರಿತು ಸಮಗ್ರ ತನಿಖೆ ನಡೆಸಬೇಕು. ಅಲ್ಲದೆ, ಪ್ರಕರಣದ ಸಂಪೂರ್ಣ ಜಾಲವನ್ನು ಪತ್ತೆಹಚ್ಚಲು ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕರವೇ ಒತ್ತಾಯಿಸಿದೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 11.30ಕ್ಕೆ ಬೆಳಗಾವಿಯ ಜ್ಯೋತಿ ಕಾಲೇಜು ಎದುರಿನಲ್ಲಿರುವ ವಿವಾ ಫಾರ್ಮಾ ಕಚೇರಿ ಮುಂಭಾಗದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದೇವೆ ಎಂದು ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ತಿಳಿಸಿದ್ದಾರೆ.
ನಕಲಿ ಔಷಧಿಗಳ ಮಾರಾಟದಿಂದ ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಪ್ರತಿಭಟನೆ ಸಂದರ್ಭದಲ್ಲಿ ದೀಪಕ ಗುಡಗನಟ್ಟಿ, ಸುರೇಶ ಗವನ್ನವರ, ಗಣೇಶ ರೋಕಡೆ
ಹೊಳೆಪ್ಪಾ ಸುಳದಾಳ ಅಡಿವೆಪ್ಪ ತಲ್ಲೂರಿ, ಬಾಳು ಜಡಗಿ
ಲಗಮಣ್ಣ ಮಾಲಂಗಿ
ರಮೇಶ್ ಯರಗನ್ನವರ, ಉದಯ ಚಿಕ್ಕನ್ನವರ, ಸತೀಶ್ ಗುಡದವರ
ಮಂಜುನಾಥ್ ರಾಥೋಡ
ಲೋಕೇಶ್ ರಾಥೋಡ
ವಿನಾಯಕ ಬೋವಿ ಅರ್ಜುನ್ ಕಾಂಬಳೆ, ಬಸವರಾಜ ಹಳೆಮನಿ
ಇಸ್ಮಾಯಿಲ್ ಮುಲ್ಲಾ ಅಭಿಷೇಕ್ ಅಗಸಗಿ, ನಾಗರಾಜ ಲಕ್ಕಪ್ಪಗೋಳ,
ಶ್ರೀಧರ್ ಹೊಳೆನವರ್ ಸಂತೋಷ ಚಕ್ರಯಿ, ಶಾಂತಾ ಹಣಬರ
ರೇಖಾ ಲೋಕರಿ, ಮಧು ಇಟಗಿ,
ರೂಪಾಲಿ ಬಾರಿಗಡ್ಡಿ, ಗೀತಾ ಕಾಂಬಳೆ, ಬಸವರಾಜ ಮಾಳಗಿ
ಉದಯ ಯಮನಪ್ಪನವರ
ದರ್ಶನ ಜಾಧವ ಮತ್ತಿತರರು ಇದ್ದರು.