ಪಾಲಿಕೆ ಮಹಾಪೌರ ಹಾಗೂ ಉಪ ಮಹಾಪೌರ ಚುನಾವಣೆ ದಿನಾಂಕ ನಿಗದಿ..
ಬುಧವಾರ ದಿನಾಂಕ 18/03/2026 ಆಯ್ಕೆ ಪ್ರಕ್ರಿಯೆ..
ಬೆಳಗಾವಿ : ಬಹುನಿರೀಕ್ಷಿತ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಡೆಪ್ಯೂಟಿ ಮೇಯರ ಸ್ಥಾನಕ್ಕೆ ಚುನಾವಣೆಯನ್ನು ಬರುವ ಬುಧವಾರ ದಿನಾಂಕ 18/03/2026 ನಿಗಧಿ ಮಾಡಲಾಗಿದೆ ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣಾಧಿಕಾರಿಗಳ ಕಡೆಯಿಂದ ಮಾಹಿತಿ ಲಭ್ಯವಾಗಿದೆ.
ಅಂದು ಬುಧವಾರ ಮುಂಜಾನೆ 9ರಿಂದ 11 ಘಂಟೆವರೆಗೆ ಮಹಾಪೌರ ಹಾಗೂ ಉಪ ಮಹಾಪೌರ ಸ್ಥಾನಗಳಿಗೆ ನಾಮಪತ್ರ ಸ್ವೀಕರಿಸಲಾಗುವದು, ಮಧ್ಯಾಹ್ನ 1 ಗಂಟೆಯಿಂದ ಆಯ್ಕೆ ಪ್ರಕ್ರಿಯೆ ನಡೆಯುವದು ಎಂಬ ಮಾಹಿತಿ ಇದೆ.
ಬೆಳಗಾವಿ ಉತ್ತರ ಹಾಗೂ ದಕ್ಷಿಣ ಮತಕ್ಷೇತ್ರಗಳಿಂದ ಹಲವಾರು ನಗರ ಸೇವಕರು ಆಕಾಂಕ್ಷಿಗಳಾಗಿದ್ದು, ಮೇಯರ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪ ಮೇಯರ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿದ್ದು, ಯಾರು ಮಹಾಪೌರ ಯಾರು ಉಪ ಮಹಾಪೌರ ಸ್ಥಾನಕ್ಕೆ ಆಯ್ಕೆ ಆಗುತ್ತಾರೋ ಎಂಬುದನ್ನು ತಿಳಿಯಲು ಬುಧವಾರ ದಿನಾಂಕ 18 ರಂದು ಫಲಿತಾಂಶ ಬರುವ ವರೆಗೆ ಕಾಯಬೇಕಿದೆ..
ವರದಿ ಪ್ರಕಾಶ್ ಬಿ ಕೆ…