ಹೊಸೂರು ಜಿಲ್ಲಾ ಪಂಚಾಯತಿ ಕ್ಷೇತ್ರವನ್ನು ಸಾಮಾನ್ಯ ಕ್ಷೇತ್ರವೆಂದು ಘೋಷಿಸಿ..

ಹೊಸೂರು ಜಿಲ್ಲಾ ಪಂಚಾಯತಿ ಕ್ಷೇತ್ರವನ್ನು ಸಾಮಾನ್ಯ ಕ್ಷೇತ್ರವೆಂದು ಘೋಷಿಸಿ..

ಐತಿಹಾಸಿಕ ಹೊಸೂರು ಗ್ರಾಮಕ್ಕೆ ನ್ಯಾಯ ನೀಡದಿದ್ದರೆ ಉಗ್ರ ಹೋರಾಟ..

ಬೈಲಹೊಂಗಲ : ಸವದತ್ತಿ ತಾಲ್ಲೂಕಿನ ಹೊಸೂರು ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು 2026ರ ಕರಡು ಅಧಿಸೂಚನೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿರಿಸಿರುವುದಕ್ಕೆ ಆಕ್ಷೇಪಣೆ ಸಲ್ಲಿಸಿ, ಹಿಂದಿನ ಮೀಸಲಾತಿ ರೊಟೇಶನ್ ಮತ್ತು ಕಾನೂನುಬದ್ಧ ಮಾನದಂಡಗಳ ಆಧಾರದಲ್ಲಿ ಮರುಪರಿಶೀಲಿಸಿ ಸಾಮಾನ್ಯ ಕ್ಷೇತ್ರವಾಗಿ ಪರಿಗಣಿಸಬೇಕು ಇಲ್ಲದಿದ್ದರೆ ಬರುವ ಎಲ್ಲ ಸ್ತರದ ಚುನಾವಣೆ ಬಹಿಷ್ಕಾರ ಹಾಕುವದಾಗಿ ಗ್ರಾಮಸ್ಥರು ಉಪವಿಭಾಗಧಿಕಾರಿ ಪ್ರವೀಣ ಜೈನ್ ಅವರ ಮೂಲಕ ಸರ್ಕಾರದ ಕಾರ್ಯದರ್ಶಿಗಳು,(ಪಂ.ರಾಜ್)ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ,ಅವರಿಗೆ ಆಕ್ಷೆಪಣಾ ಮನವಿ ನೀಡಿ ಆಕ್ರೋಶ ವ್ಯಕ್ತಪಡಿಸಿದರು.

ಸವದತ್ತಿ ತಾಲ್ಲೂಕಿನ ಹೊಸೂರು ಜಿಲ್ಲಾ ಪಂಚಾಯತ್ ಕ್ಷೇತ್ರದ 2026ರ ಕರಡು ಮೀಸಲಾತಿ ಅಧಿಸೂಚನೆಗೆ ಈ ಮೂಲಕ ಆ ಕ್ಷೇತ್ರಕ್ಕೆ ಒಳ ಪಟ್ಟ ಹೊಸೂರ, ಮಲ್ಲೂರ, ಯಕ್ಕುಂಡಿ, ಬಡ್ಲಿ ಮತ್ತು ಇಂಚಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಜನತೆ ಪಕ್ಷಾತೀತವಾಗಿ ಹೊಸೂರ ಜಿಲ್ಲಾ ಪಂಚಾಯತ ಕರಡು ಮೀಸಲಾತಿ‌ ಪಟ್ಟಿಗೆ ನೂರಾರು ಸಂಖ್ಯೆಯಲ್ಲಿ ಆಗಮಿಸಿ ಬುಧವಾರ ಆಕ್ಷೇಪಣೆಯನ್ನು ಸಲ್ಲಿಸಿದರು.

ಮಿಸಲಾತಿ ಜಾರಿಯಾದ 1995 ರಿಂದ‌ ಒಟ್ಟು 6 ಅವಧಿಯಲ್ಲಿ 3 ವೇಳೆ ಪರಿಶಿಷ್ಟ ಜಾತಿ,
2ವೇಳೆ ಹಿಂದುಳಿದ ಎ ವರ್ಗ ಒಂದು ಬಾರಿ ಸಾಮನ್ಯ ಮಹಿಳೆಗೆ ಮಿಸಲುವಾಗಿತ್ತು ಹೊಸೂರು ಕ್ಷೇತ್ರಕ್ಕೆ ಸಾಮಾನ್ಯ ವರ್ಗದವರಿಗೆ ಒಮ್ಮೆಯೂ ಲಭ್ಯವಾಗಿಲ್ಲ. ತಾಲೂಕಿನ
ಇತರ ಕ್ಷೇತ್ರಗಳಿಗೆ ಹೋಲಿಸಿದಾಗ ಉಗರಗೋಳ ಕ್ಷೇತ್ರಕ್ಕೆ 1995, 2000 ಮತ್ತು 2016ರಲ್ಲಿ ಮುರಗೋಡಕ್ಕೆ 1995 ಮತ್ತು 2026, ಕರಿಕಟ್ಟಿಗೆ 2011 ಮತ್ತು 2026ರಲ್ಲಿ ಸಾಮಾನ್ಯ ಕ್ಷೇತ್ರವಾಗಿ ಮೀಸಲಾತಿ ನೀಡಿರುವ ದಾಖಲೆಗಳಿವೆ. ಮುನವಳ್ಳಿ ಮತ್ತು ಯರಗಟ್ಟಿ ಕ್ಷೇತ್ರಗಳ ಹಿಂದಿನ ಮೀಸಲಾತಿಯಲ್ಲಿ 2 ಅವಧಿಗೆ ಸಾಮಾನ್ಯ ಕ್ಷೇತ್ರಗಳಾಗಿವೆ. ಇಂದು ಈ‌ ಕ್ಷೇತ್ರಗಳು ಇಲ್ಲಾ.

ನಾವು ಕೇಳುತ್ತಿರುವದು ಸಾಮಾನ್ಯ ಕ್ಷೇತ್ರದ ಚುನಾಯಿತ ಜಿಲ್ಲಾಪಂಚಾಯತಿ ಸದಸ್ಯರಾಗಲು ಮಾತ್ರವಲ್ಲ. ಸಾಮಾನ್ಯ ಜನರ ಹಕ್ಕು ಹಾಗೂ ಹೊಸೂರ ಕ್ಷೇತ್ರದ ಸ್ವಾಭಿಮಾನ, ಅಸ್ತಿತ್ವ, ರಾಜಕೀಯ ತುಳಿತಕ್ಕೆ ಒಳಗಾಗಿರುವ ಈ‌ ಕ್ಷೇತ್ರದ ಜನತೆಯ ಒಕ್ಕೂರುಲಿನ ಅಗ್ರಹ ಇಂಚಲ ಶಿವಯೋಗಿಗಳ ನಾಡು ಈ ಭಾಗದ ವಿದ್ಯಾಕಾಶಿ, ದಕ್ಷಿಣ ಕಾಶಿ ಎಂದೆ ಪ್ರಸಿದ್ದಿ ಪಡೆದ ಶ್ರೀಸೋಗಲ ಶ್ರೀಕ್ಷೇತ್ರ, ಅಂಧ ಅನಾಥರ ಆಶ್ರಯದಾತ ಯಕ್ಕುಂಡಿ ವಿರಕ್ತ ಮಠ, ಹಿಂದೂ ಮುಸ್ಲಿಂ ಭಾವೈಕ್ಯದ ಫೀರದಿಲಾವಾರ ಸುಕ್ಷೇತ್ರ ಯಕ್ಕುಂಡಿ, ಜೈನ ಮಂದಿರದ ಪುಣ್ಯ ನೆಲ ಬಡ್ಲಿ, ಸಂತ ಸೇವಾಲಾಲ ಆಚರಣೆಯ ತಾಂಡಾಗಳು, ಮಲ್ಲೂರ ಗ್ರಾಮದ ಬಂಡೆಮ್ಮಾ, ಇತಿಹಾಸ ಪ್ರಸಿದ್ದ ಹೊಸೂರ ಗ್ರಾಮ, 250ಕ್ಕೂ ಹೆಚ್ಚು ಸ್ವಾತಂತ್ರ್ಯ ಸೇನಾನಿಗಳನ್ನು ನೀಡಿದ್ದು, ಸ್ವರಾಜ್ಯದ ಕಲ್ಪನೆ ನೀಡಿದ ಗ್ರಾಮಕ್ಕೆ ಮಹಾತ್ಮಾ ಗಾಂಧಿಜಿ, ಉಕ್ಕಿನ‌ ಮನುಷ್ಯ ಸರರ್ಧಾರ ವಲ್ಲಭಾಯಿ ಪಟೇಲ್, ತಿಲಕ ಹಾಗೂ ನವರೋಜಿಯವರು ಆಗಮಿಸಿದ ಕ್ರಾಂತಿಯ ನಾಡು.
12 ನೇ ಶತಮಾನದ ಶರಣರಾದ ಚನ್ನಬಸವಣ್ಣನವರ ಪಾದಸ್ಪರ್ಶ ಪಡೆದು 18ನೇ ಶತಮಾನದ ವೈರಾಗ್ಯ ಚಕ್ರವರ್ತಿ ಗುರು ಮಡಿವಾಳೇಶ್ವರರು ನೆಲಿಸಿದ ಪುಣ್ಯಭೂಮಿ ಒರ್ವ ಶಾಸಕರನ್ನು ಕೊಟ್ಟ ಗ್ರಾಮಗಳ ಈ ಕ್ಷೇತ್ರದ ಸಾಮಾನ್ಯ ವರ್ಗದ ಜನ ಇಂದು ಕಳೆದ 36 ವರ್ಷದಿಂದ ಜಿಲ್ಲಾಪಂಚಾಯತಿ ಸ್ಥಾನಕ್ಕೆ ನಾವೆ ಚುನಾಯಿಸಿದ ಪ್ರತಿನಿಧಿಗಳ ಮುಂದೆ ಭಿಕ್ಷೆ ಬೆಡುವಂತಾಗಿದೆ, ಅಂದು ಬ್ರಿಟಿಷ್ ವಿರುದ್ದ ಹೋರಾಡಿದ ಗ್ರಾಮ ಇಂದು ನಮ್ಮ ಬ್ರಷ್ಟ ಆಡಳಿತ ಕುಂತ್ರತದ ರಾಜಕಾರಣಿಗಳ ವಿರುದ್ದ ಪಕ್ಷಾತೀತವಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದಿರುವದು ನಮ್ಮ ದುರ್ಧೈವ‌ ಆದ್ದರಿಂದ ಹೊಸೂರ ಕ್ಷೇತ್ರವನ್ನು ಸಾಮನ್ಯ ಕ್ಷೇತ್ರವಾಗಿ ಬದಲಾಯಿಸಬೇಕೆಂದು ಆಗ್ರಹಿಸಿದರು.

ಆದ್ದರಿಂದ ಹೊಸೂರು ಕ್ಷೇತ್ರದ 1995ರಿಂದ 2026ರವರೆಗಿನ ಮೀಸಲಾತಿ ಇತಿಹಾಸವನ್ನು ಅಧಿಕೃತ ದಾಖಲೆಗಳ ಆಧಾರದಲ್ಲಿ ಮರುಪರಿಶೀಲಿಸಿ
ಅಂತಿಮ ಅಧಿಸೂಚನೆ ಪ್ರಕಟಿಸುವ ನಿಗದಿತ ಅವಧಿಯೊಳಗೆ ಈ ಮನವಿ ಪರಿಗಣಿಸಿ, ಕಾನೂನುಬದ್ಧ ಮತ್ತು ನ್ಯಾಯಸಮ್ಮತ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಶಾಸಕ ಮಹಾಂತೇಶ ಕೌಜಲಗಿ ನಿವಾಸಕ್ಕೆ ತೆರಳಿ ಅವರ ಅನುಪಸ್ಥಿತಿಯಲ್ಲಿ ಅವರ ಸಹೋದರ ಬಸವರಾಜ ಕೌಜಲಗಿ ಅವರಿಗೆ ಮನವಿ ನೀಡಿ, ಜಿಪಂ ಕ್ಷೇತ್ರಗಳ ಮೀಸಲಾತಿಯ ಕರುಡ ಪ್ರತಿ ಅಂತಿಮವಾಗುವ ಮೊದಲೇ ಸರ್ಕಾರದಿಂದ ಒತ್ತಡ ತಂದ ನ್ಯಾಯ ಒದಗಿಸಬೇಕು ಇಲ್ಲದಿದ್ದರೆ ಪಕ್ಷಾತೀತವಾಗಿ, ಜ್ಯಾತ್ಯಾತೀತವಾಗಿ ನಮ್ಮ ಎಂ, ಎಲ್,ಎ, ಎಂಪಿ, ಗ್ರಾಮ ಪಂಚಾಯತಿ, ತಾಲೂಕಾ ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆ ಬಹಿಷ್ಕಾರ ಹಾಕುವದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪ್ರಕಾಶ ಬಾಳೆಕುಂದರಗಿ, ಎಫ್.ಎಸ್. ಸಿದ್ದನಗೌಡರ, ಗುರುಪಾದ ಕಳ್ಳಿ, ಮಲ್ಲಿಕಾರ್ಜುನ ಹುಂಬಿ, ಈರಣ್ಣ ಬೆಂಡಿಗೇರಿ, ಜಗದೀಶ್ ಬೂದಿಹಾಳ, ಬಸವರಾಜ ಪೆಂಟೆದ, ಸೋಮಲಿಂಗ ಮೆಳ್ಳಿಕೆರಿ, ಈರಣ್ಣ ಸಂಪಗಾಂವ, ಮಡಿವಾಳಪ್ಪ ಚಳಕೊಪ್ಪ, ಉಮೇಶ್ ಬೋಳೆತ್ತಿನ, ಉದಯ ಬೂದುಹಾಳ, ಬಸವರಾಜ ದುಗ್ಗಾಣಿ, ಸುರೇಶ ಬಾಳೆಕುಂದರಗಿ, ಕುಮಾರ ಸೋಗಲ, ಮೋಹನ ವಕ್ಕುಂದ, ಮಂಜುನಾಥ ಹಪ್ಪಳ್ಳಿ, ಸೋಮಪ್ಪ ಸಂಗೋಳ್ಳಿ, ಅಶೋಕ ಇಂಗಳಗಿ, ಮುನೀರ ಶೇಖ, ದಿಲಾವಾರ ದೂಪದಾಳ, ಸಕಲೀನ‌ ನದಾಫ್, ಬಸವರಾಜ ವಿವೇಕಿ, ಶಂಕರ ಹಿರೂಣವರ, ನಾಗಪ್ಪ ಕುರಿ, ಮಲ್ಲಿಕಾರ್ಜುನ ವಕ್ಕುಂದ, ಮಹಾಂತೇಶ ಚಿಕ್ಕೊಪ್ಪ, ಅರುಣ ಬೋಳೆತ್ತಿನ, ರುದ್ರಪ್ಪ ಕುಸಲಾಪೂರ, ಮುಶೆಪ್ಪ ಜಡಿ, ಮಡಿವಾಳಪ್ಪ ಕಮತಗಿ, ಸಂಜು ಚಿಕ್ಕೊಪ್ಪ, ನಾಗರಾಜ ಬುಡಶೆಟ್ಟಿ, ಮಹಾಂತೇಶ ಅಡಕಿ, ಆನಂದ ಬೂದಿಹಾಳ, ಬಸವರಾಜ ನಾಯಕರ , ಪ್ರಶಾಂತ ಮಾಕಿ, ಮಡಿವಾಳಪ್ಪ ಚಿಕ್ಕೊಪ್ಪ, ಶಿವಾನಂದ ಪಣದಿ, ಮಹಾಂತೇಶ ಕುಸಲಾಪೂರ, ಪ್ರಕಾಶ ಯರಡಾಲ,ಮನೋಜ ಹುಗ್ಗಿ, ಅಪ್ಪು ಇಳಿಗೇರ, ಮಹಾಂತೇಶ ಕುಸಲಾಪೂರ, ವೀರಬಸು ಮುನವಳ್ಳಿ.ಮಲ್ಲಪ್ಪ ಯರಡಾಲ, ಎಸ್.ಪಿ ಬೂದಿಹಾಳ, ಸಂಜು ಪಾಟೀಲ ಸೇರಿದಂತೆ ನೂರಾರು ಜನ ಇದ್ದರು

Leave a Reply

Your email address will not be published. Required fields are marked *